Tuesday, July 21, 2026
spot_imgspot_img
spot_imgspot_img

ಇಸ್ರೇಲ್‌ನ ಪರಮಾಣು ಸೌಲಭ್ಯವಿರುವ ಪಟ್ಟಣಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ – 100ಕ್ಕೂ ಅಧಿಕ ಮಂದಿಗೆ ಗಾಯ

- Advertisement -
- Advertisement -

ಟೆಲ್‌ ಅವೀವ್: ಪರಮಾಣು ಸೌಲಭ್ಯವಿರುವ ಇಸ್ರೇಲಿನ ಪಟ್ಟಣಗಳಾದ ಡಿಮೋನಾ ಮತ್ತು ಅರಾದ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್‌ ಅಟ್ಯಾಕ್‌ ಮಾಡಿದೆ.

ಡಿಮೋನಾದಲ್ಲಿರುವ ಶಿಮೊನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರವು ಇರಾನ್‌ನ ಟಾರ್ಗೆಟ್‌ ಆಗಿದ್ದು, ಎರಡು ನೇರ ದಾಳಿಗಳು ವಸತಿ ಕಟ್ಟಡಗಳ ಮುಂಭಾಗಗಳನ್ನು ನಾಶಗೊಳಿಸಿವೆ.

ಡಿಮೋನಾ ಮತ್ತು ಅರಾದ್ ಎರಡರ ಮೇಲೂ ದಾಳಿ ಮಾಡಲಾಗಿದೆ, ಪರಿಣಾಮ ನೂರಾರು ಕಿಲೋಗ್ರಾಂಗಳಷ್ಟು ತೂಕದ ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಎರಡು ನೇರ ಹೊಡೆತಗಳು ಸಂಭವಿಸಿದವು” ಎಂದು ಅಗ್ನಿಶಾಮಕ ದಳದವರನ್ನು ಉಲ್ಲೇಖಿಸಿ AFP ವರದಿ ಮಾಡಿದೆ.

ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ, ವಿಪತ್ತು, ಅಂಬುಲೆನ್ಸ್ ಮತ್ತು ರಕ್ತ ನಿಧಿ ಸೇವೆಯಾದ ಮ್ಯಾಗೆನ್ ಡೇವಿಡ್ ಅಡೋಮ್‌ನ ಮೊದಲ ಪ್ರತಿಕ್ರಿಯೆ ನೀಡಿದ್ದು, ಅರಾದ್‌ನಲ್ಲಿ 84 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿ ಗಂಭೀರವಾಗಿದ್ದಾರೆ. ಡಿಮೋನಾದಲ್ಲಿ 33 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ವ್ಯಾಪಕ ಹಾನಿ ಮತ್ತು ಅವ್ಯವಸ್ಥೆ ಇತ್ತು ಎಂದು ಅರೆವೈದ್ಯ ಕಾರ್ಮೆಲ್ ಕೊಹೆನ್ ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ..

- Advertisement -

Related news

error: Content is protected !!