Friday, April 26, 2024
spot_imgspot_img
spot_imgspot_img

ಹೈ ಅಲರ್ಟ್ ಖಾಕಿಪಡೆ

- Advertisement -G L Acharya panikkar
- Advertisement -

ಮೈಸೂರು: ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ರಾಜ್ಯ ವ್ಯಾಪಿ ತನಿಖೆ ಹಿನ್ನೆಲೆ.ಮೈಸೂರಿನಲ್ಲಿ ಪೊಲೀಸರ ಹೈ ಅಲರ್ಟ್.
ಕೇರಳ ಕರ್ನಾಟಕ ಗಡಿಯ ಬಾವಲಿ ಚೆಕ್ ಪೋಸ್ಟನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಡ್ರಗ್ಸ್ ವಿಚಾರವಾಗಿ ಜಿಲ್ಲೆಯ ಎಲ್ಲಾ ರೆಸಾರ್ಟ್‌ಗಳಿಗೂ ನೋಟಿಸ್ ನೀಡಿದ್ದಾರೆ.
ರೆಸಾರ್ಟ್ ಆವರಣದಲ್ಲಿ ಡ್ರಗ್ ಸಿಕ್ಕರೆ ರೆಸಾರ್ಟ್ ಮಾಲೀಕರೇ ಹೊಣೆಯಾಗಬೇಕಾಗುತ್ತದೆ.
ಅಪರಾಧಿಯಷ್ಟೇ ಮಾಲೀಕರು ಕೂಡ ಈ ಪ್ರಕರಣದಲ್ಲಿ ಹೊಣೆಗಾರರಾಗಿರುತ್ತಾರೆ.


ಹೊರಗಡೆಯಿಂದ ರೆಸಾರ್ಟ್ ಗೆ ಬಂದು ಡ್ರಗ್ಸ್ ಸೇವನೆ‌ ಮಾಡುವ ಸಾಧ್ಯತೆಯಿರುವುದರಿಂದ ಈ ಹಿನ್ನೆಲೆ ನೋಟಿಸ್ ಜಾರಿಗೊಳಿಸಲಾಗಿದೆ.
ಕಬಿನಿ ಹಾಗೂ ಬೈಲುಕುಪ್ಪೆ ಸುತ್ತಲಿನ ರೆಸಾರ್ಟ್‌ಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ.
ಡ್ರಗ್ಸ್ ವಿಚಾರವಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಆಯಾ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ಗಳು ಇದರ ಜವಾಬ್ದಾರಿ ಹೊಂದಿರುತ್ತಾರೆ.


ಅಂತರರಾಜ್ಯ ಡ್ರಗ್ ಮಾರಾಟ ವಿಚಾರವಾಗಿ ಮಾಹಿತಿ ಇದೆ ಆದರೆ ಅದು ತನಿಖೆ ಹಂತದಲ್ಲಿರುವ ಕಾರಣ ಹೇಳಲು ಸಾಧ್ಯವಿಲ್ಲ.
ಆಂಧ್ರ ಪ್ರದೇಶದ ನಂಟಿರುವ ಒಂದು ಪ್ರಕರಣ ತನಿಖೆ ಹಂತದಲ್ಲಿದೆ‌ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!