





ಇಂದು ಪ್ರಾತಃ 7.00 ರಿಂದ ಉಷಾ ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ಚಂಡಿಕಾ ಯಾಗ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.


ಸಾಯಂಕಾಲ 5.00 ರಿಂದ : ಅಂಕುರ ಪೂಜೆ, ದುರ್ಗಾಪೂಜೆ, ಕುಂಭೇಶ ಕರ್ಕರಿ ಪ್ರತಿಷ್ಠೆ, ಬ್ರಹ್ಮಕಲಶ ಪ್ರತಿಷ್ಠೆ, ಪರಿವಾರ ದೇವತಾ ಕಲಶ ಪ್ರತಿಷ್ಠೆ, ಕಲಶಾಧಿವಾಸ ಹೋಮ, ನಿಶೀಥ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6:30 ರಿಂದ ನಡೆಯುವ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಪಡುಕುತ್ಯಾರು ಉಡುಪಿ, ಪರಮಪೂಜ್ಯ ಶ್ರೀ ಮಹಾಬಲ ಸ್ವಾಮೀಜಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಣಿಯೂರು, ಪರಮಪೂಜ್ಯ ಶ್ರೀ ಯೋಗಿ ಕೌಸ್ತುಭಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಲಿರುವರು.ಶಾಸಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಎಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಟ್ಲ ಶ್ರೀ ಧನ್ವಂತರಿ ಕ್ಷೇತ್ರ ಜ್ಯೋತಿಷ್ಯ ಕೇಶವ ಭಟ್, ಬಂಟ್ವಾಳ ಮಾಜಿ ಶಾಸಕ ಹಾಗೂ ಕರ್ನಾಟಕ ಸರಕಾರ ಮಾಜಿ ಅರಣ್ಯ ಸಚಿವ ರಮಾನಾಥ ರೈ, ವಾಸ್ತು ತಜ್ಞ ಪ್ರಸನ್ನ ಭಟ್ ಮುಳಿಯಾಲ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಕೃಷ್ಣಯ್ಯ ಕೆ., ವಿಟ್ಲ ಅರಮನೆ, ನರೇಂದ್ರ ರೈ ನೆಲ್ಲೊಟ್ಟು, ಅನಂತಾಡಿ, ಹರೀಶ್ ಆರಿಕೋಡಿ ಧರ್ಮದರ್ಶಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ, ಬೆಳ್ತಂಗಡಿ, ಅರ್ಚಕ, .ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀನಿವಾಸ ಶಗ್ರೀತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಉದಯೇಶ ಕೆದಿಲಾಯ ವಿಟ್ಲ ಗೌರವ ಉಪಸ್ಥಿತರಿರುವರು. ಧಾರ್ಮಿಕ ಉಪನ್ಯಾಸಕ ಹಿರಣ್ಯ ವೆಂಕಟೇಶ ಪ್ರಧಾನ ಭಾಷಣ ಮಾಡಲಿರುವರು.

ವಿ.ಕೆ. ಟ್ರೇಡ್‌ಲಿಂಕ್ಸ್ ಅಟೋಮೊಬೈಲ್ ಸ್ಪಾರ್ ಪಾರ್ಟ್ಸ್ ಡಿಸ್ಟ್ರಿಬ್ಯೂಟರ್ಸ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ದುರ್ಗಾಂಬಾ ಕಲಾವಿದರು ವರಪ್ಪಾದೆ, ವಿಟ್ಲ ಅಭಿನಯಿಸಿರುವ ‘ಬುಡಿಯೆರಾಪುಜಿ’ ಎಂಬ ನಾಟಕ ನಡೆಯಲಿದೆ.