Sunday, August 23, 2026
spot_imgspot_img
spot_imgspot_img

ನಾಪತ್ತೆಯಾಗಿದ್ದ ವ್ಯಕ್ತಿ, ಕಾರು ಸಮೇತ ನೀರಿನ ಹೊಂಡದಲ್ಲಿ ಶವವಾಗಿ ಪತ್ತೆ ..!

- Advertisement -
- Advertisement -

ನಾಪತ್ತೆಯಾಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಕಲಬುರಗಿ-ಜೇವರ್ಗಿ ಶಾಹಬಾದ್ ಕ್ರಾಸ್ ಬಳಿ ಇರುವ ನೀರಿನ ಹೊಂಡದಲ್ಲಿದ್ದ ಕಾರಿನಲ್ಲಿ ಹೆದ್ದಾರಿ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಅಮೃತ್ (40) ಎಂದು ಗುರುತಿಸಲಾಗಿದೆ.

ಅಮೃತ್ ಜನವರಿ 11 ರಂದು ಕಾರಿನೊಂದಿಗೆ ನಾಪತ್ತೆಯಾಗಿದ್ದರು. ಆದರೆ ಈಗ ಕಾರು ಶಾಹಬಾದ್ ಕ್ರಾಸ್ ಬಳಿ ಇರುವ ನೀರಿನ ಹೊಂಡದಲ್ಲಿದ್ದ ಕಂಡುಬಂದಿದೆ. ಮಾರುತಿ ಸ್ವಿಫ್ಟ್ ಇದಾಗಿದ್ದು, ಇದನ್ನು ಪರಿಶೀಲಿಸಿದಾಗ ಅಮೃತ್​​ ಶವವಾಗಿ ಸಿಕ್ಕಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಕಾರು ಮೇಲೆತ್ತುವ ಕಾರ್ಯಾಚರಣೆ ಆರಂಭಗೊಂಡಿದೆ. ಮತ್ತೊಂದೆಡೆ ಅಮೃತ್​ ನಿಗೂಢ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಯಾರೋ ಕೊಲೆ ಮಾಡಿ ಹಾಕಿರೋ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!