Monday, April 29, 2024
spot_imgspot_img
spot_imgspot_img

ಸುರತ್ಕಲ್: ಜೋಕಟ್ಟೆಯ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

- Advertisement -G L Acharya panikkar
- Advertisement -
vtv vitla

ಸುರತ್ಕಲ್: ಯುವಕನೋರ್ವ ಹೃದಯಾಘಾತಕ್ಕೊಳಗಾಗಿ ಸೌದಿ ಅರೆಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಜೋಕಟ್ಟೆ ಕೆಬಿಎಸ್ ನಿವಾಸಿ ಇರ್ಷಾದ್ (33) ಮೃತಪಟ್ಟವರು.

ಜೋಕಟ್ಟೆ ಕೆಬಿಎಸ್ ನಿವಾಸಿ ಅಬ್ದುಲ್ ರಝಾಕ್ ಅವರ ಮಗ ಇರ್ಶಾದ್ 7ವರ್ಷಗಳಿಂದ ಸೌದಿ ಅರೆಬಿಯಾದ ಅಲ್ ಕೋಬ‌ರ್‌ನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ ತಾಯ್ನಾಡಿಗೆ ಬಂದು ಸೌದಿ ಅರೆಬಿಯಾಕ್ಕೆ ತೆರಳಿದ್ದರು.


ಗುರುವಾರ ಬೆಳಗ್ಗೆ ಇರ್ಶಾದ್ ಅವರಿಗೆ ತೀವ್ರ ತರಹದ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ಸ್ನೇಹಿತರು ಅಲ್ ಕೋಬರ್ ನ ಅಲ್ ಸಲಾಮ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂದು ಅವರ ಕುಟುಂಬ ಮೂಲ ಮಾಹಿತಿ ನೀಡಿದೆ. ಮೃತ ಇರ್ಶಾದ್ ವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!