Monday, April 29, 2024
spot_imgspot_img
spot_imgspot_img

ಕೇರಳದ ಮೇಲೆ ಐಸಿಸ್-ಕೆ ಉಗ್ರರ ಕಣ್ಣು; ಭಾರತಕ್ಕೆ ಆತಂಕ

- Advertisement -G L Acharya panikkar
- Advertisement -

ತಾಲಿಬಾನ್​ ಉಗ್ರರ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲೀಗ ಮತ್ತೊಂದು ಉಗ್ರವಾದಿ ಗುಂಪು ಸಕ್ರಿಯವಾಗಿದೆ. ಕಾಬೂಲ್​ನಲ್ಲಿ ನಡೆದ ಸರಣಿ ಸ್ಫೋಟದ ಹಿಂದೆ ತನ್ನದೇ ಕೈವಾಡ ಇದೆ ಎಂದು ಐಸಿಸ್​-ಕೆ ಹೊಣೆ ಹೊತ್ತುಕೊಂಡಿದೆ. ಈ ಐಸಿಸ್​-ಕೆ ಮೊದಲ ಸ್ವಯಂ ಘೋಷಿತ ಇಸ್ಲಾಮಿಕ್​​ ಕ್ಯಾಲಿಫೇಟ್ ಎಂದು ಕರೆಯಲಾಗುತ್ತದೆ.

ತಾಲಿಬಾನ್ ಮತ್ತು ಐಸಿಸ್- ಕೆ ಗುಂಪುಗಳ ನಡುವೆ ಸೈದ್ದಾಂತಿಕ ವೈರತ್ವ ಇದೆ. ಹೀಗಾಗಿ ತಾಲಿಬಾನ್​​​​ ಹಿಡಿತ ಸಾಧಿಸಿದ್ದ ಕಾಬೂಲ್​​ ಅನ್ನು ಟಾರ್ಗೆಟ್​​ ಮಾಡಿದೆ. ತಾಲಿಬಾನಿ ವಿರೋಧಿ ಉಗ್ರ ಸಂಘಟನೆ ಐಸಿಸ್- ಕೆ ಹಲವು ದೇಶಗಳನ್ನು ಟಾರ್ಗೆಟ್ ಮಾಡಿಕೊಂಡಿದೆ. ಈ ಪೈಕಿ ಭಾರತವೂ ಒಂದು ಎಂಬ ಆಘಾತಕಾರಿ ವಿಚಾರ ಬಯಲಿಗೆ ಬಂದಿದೆ.

ಐಸಿಸ್- ಕೆ ಮುಂದಿನ ಟಾರ್ಗೆಟ್​​​​ ಭಾರತ ಎಂದು ದೇಶದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಐಸಿಸ್​-ಕೆ ಸಂಘಟನೆಯ ಪೂರ್ಣ ಹೆಸರು ಇಸ್ಲಾಮಿಕ್ ಸ್ಟೇಟ್ ಖೋರಾಸನ್. ಇದು ರಚನೆಯಾದದ್ದು 2014ರಲ್ಲಿ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಗುಂಪು ಹಲವು ದೇಶಗಳಲ್ಲಿ ಇಸ್ಲಾಮಿಕ್​ ಕ್ಯಾಲಿಫೇಟ್ ರೂಲ್​​​​ ಹೇರಿಕೆ ಮಾಡಬೇಕು ಎಂದು ಹೊರಟಿದೆ.

ಖೋರಾಸನ್ ಎಂಬುದು ಒಂದು ಐತಿಹಾಸಿಕ ಪದ. ಈ ಗುಂಪನ್ನು ISIS-K ಅಥವಾ IS-K ಎಂದು ಕರೆಯುತ್ತಾರೆ. ತಾಲಿಬಾನ್ ತೊರೆದವರೇ ISIS-K ಸ್ಥಾಪಕ ಸದಸ್ಯರು ಎಂಬುದು ಗಮನಾರ್ಹ.

ತಾಲಿಬಾನ್‌ ಆಸಕ್ತಿ ಅಫ್ಘಾನಿಸ್ತಾನಕ್ಕೆ ಸೀಮಿತವಾಗಿದ್ದರೆ, ಅದಕ್ಕಿಂತ ಭಿನ್ನವಾದ ಐಸಿಸ್‌- ಕೆ ಜಾಗತಿಕ ಐಎಸ್ ನೆಟ್‌ವರ್ಕ್‌ನ ಭಾಗವಾಗಿದೆ. ಎಲ್ಲಿಗೆ ತಲುಪಲು ಸಾಧ್ಯವೋ ಅಲ್ಲಿ ಮಾನವೀಯ ಗುರಿಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತದೆ. ಪ್ರಪಂಚದ ಮಾನವೀಯ ಗುರಿಗಳ ಮೇಲೆ ದಾಳಿ ನಡೆಸುವುದು, ಯುವಕರಿಗೆ ಟ್ರೈನಿಂಗ್​ ನೀಡಿ ತಮ್ಮ ಸಂಘಟನೆ ಸೇರಿಸಿಕೊಳ್ಳುವುದು, ದೇಶಗಳಿಗೆ ಡ್ರಗ್ಸ್ ಹಾಗೂ ಜನರ ಕಳ್ಳಸಾಗಣೆ ಮಾಡುವುದು, ತಮ್ಮ ಅಂಜೆಡಾಗಳಿಗಾಗಿ ಕೆಲಸ ಮಾಡುವುದು ಇದರ ಉದ್ದೇಶ.

ಒಂದೆಡೆ ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ISIS-K ಕಣ್ಣು ಭಾರತದ ಮೇಲೆ ಬಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ಮತ್ತು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಜಮ್ಮು-ಕಾಶ್ಮೀರ ಸಂಪೂರ್ಣ ಕೈವಶ ಮಾಡಲು ಸಜ್ಜಾಗಿವೆ. ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲೌನಾ ಮಸೂದ್ ಅಜರ್ ಕಾಬೂಲ್‌ನಲ್ಲಿ ತಾಲಿಬಾನ್ ನಾಯಕರನ್ನು ಭೇಟಿಯಾಗಿ ನೆರವು ಕೇಳಿದ್ದಾನೆ.

ಭಾರತದ ಮುಂಬೈ ಮತ್ತು ಕೇರಳದಿಂದ ಹಲವರು ಐಸಿಸ್​​ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಒಂದೆಡೆ ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಕಾಶ್ಮೀರ ಟಾರ್ಗೆಟ್​​ ಮಾಡಿದರೆ, ಇನ್ನೊಂದೆಡೆ ISIS-K ಕೇರಳ ಟಾರ್ಗೆಟ್​ ಮಾಡಿದೆ. ಇದರಿಂದ ಭಾರತಕ್ಕೆ ದೊಡ್ಡ ಅಪಾಯವೊದಗಿ ಬಂದಿದೆ.

- Advertisement -

Related news

error: Content is protected !!