Friday, June 26, 2026
spot_imgspot_img
spot_imgspot_img

ಅಡ್ಯಾರ್: ವಾರಿಧಿ ಲಾಡ್ಜ್ ನಲ್ಲಿ ಅಂದರ್ ಬಾಹರ್; ಲಾಡ್ಜ್ ಮಾಲೀಕ ಸೇರಿ 10 ಮಂದಿ ಅಂದರ್!

- Advertisement -
- Advertisement -

ಅಡ್ಯಾರ್: ಸೋಮನಾಥ ಕಟ್ಟೆಯ ಬಳಿ ಇರುವ ವಾರಿಧಿ ಲಾಡ್ಜ್ ನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ದಕ್ಷಿಣ ಉಪವಿಭಾಗದ ಎಸಿಪಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಲಾಡ್ಜ್ ನ ಕೊಠಡಿಯೊಂದರಲ್ಲಿ ಇಸ್ಪೀಟ್ ಆಟ ಆಡುತ್ತಿದ್ದ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಲಾಡ್ಜ್ ಮಾಲೀಕ ಉಳಿಪದವು ಶ್ರೀಕಾಂತ್ ಶೆಟ್ಟಿ, ಅಡ್ಯಾರಿನ ಅರುಣ್ ಬೆಳ್ಚಾಡ, ಕಕ್ಕೆಪದವಿನ ರೋಹಿತ್ ಪೂಜಾರಿ, ಉಳಿಪದವಿನ ಚಂದ್ರಶೇಖರ, ಅಡ್ಯಾರಿನ ಜಯಂತ್ ಗಾಣಿಗ, ಉಜ್ಜೋಡಿಯ ಶರತ್, ಗೋರಿಗುಡ್ಡೆಯ ರಾಹುಲ್, ಬೋಳಂತೂರಿನ ನವೀನ್, ವೆಲೆನ್ಸಿಯಾದ ಪ್ರೀತಮ್, ಬಜಾಲಿನ ಶೈಲೇಶ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ 9500 ನಗದು, ಎರಡು ಮೋಟಾರು ಸೈಕಲ್ ಗಳು, 8 ಸೆಟ್ ಹ್ಯಾಂಡ್ ಮೊಬೈಲ್ ಸೇರಿದಂತೆ ಒಟ್ಟು 12,26,700 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

driving
- Advertisement -

Related news

error: Content is protected !!