Monday, April 29, 2024
spot_imgspot_img
spot_imgspot_img

ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೆಸರಿನಲ್ಲಿ ಋಷಿ ಪರಂಪರೆಗೆ ಅವಮಾನ.

- Advertisement -G L Acharya panikkar
- Advertisement -

ಕೇರಳ: ಸಂಸ್ಕೃತಿಯನ್ನು ಬಿಂಬಿಸುವಂತಿದ್ದ ವಿವಾಹಗಳು ಇತ್ತೀಚೆಗೆ ವಿವಾದಕ್ಕೆ ಎಡೆಮಾಡಿಕೊಡುತ್ತಿವೆ. ಪ್ರೀ ವೆಡ್ಡಿಂಗ್ ಪೋಟೋಶೂಟ್ ಗಳ ಹೆಸರಿನಲ್ಲಿ ತೆಗೆಯುವ ಛಾಯಾಚಿತ್ರಗಳು ನೋಡುವವರಿಗೆ ಮುಜುಗರವನ್ನು ಉಂಟು ಮಾಡುತ್ತದೆ. ಇವು ಹೊಸ ವಿವಾದ ಸೃಷ್ಟಿಸುತ್ತಿವೆ. ಇಂತಹುದೇ ಹೊಸ ವಿವಾದಕ್ಕೆ ಕಾರಣವಾಗಿರುವುದು ಕೇರಳದಲ್ಲಿ ಋಷಿ ವೇಷದಲ್ಲಿ ನಡೆದ ಪೋಟೋಶೂಟ್.

ಕೇರಳದ ಮತ್ತೊಂದು ಜೋಡಿ ನಡೆಸಿದ ಪ್ರೀ ವೆಡ್ಡಿಂಗ್ ಪೋಟೊಶೂಟ್ ಹಾಗೂ ಕಾನ್ಸೆಪ್ಟ್ ಹಿಂದೂ ಧರ್ಮಿಯರ ಕಣ್ಣು ಕೆಂಪಾಗಿಸಿದೆ.

ಋಷಿ ಹಾಗೂ ಋಷಿಮಾತೆಯಂತೆ ವೇಷಭೂಷಣ ಧರಿಸಿದ ಜೋಡಿಯೊಂದು ನದಿತೀರ,ಕಾಡಿನಲ್ಲಿ ರೋಮ್ಯಾನ್ಸ್ ಮಾಡುತ್ತಿರುವಂತೆ ಪೋಸು ನೀಡಿ ಪೋಟೋಶೂಟ್ ಮಾಡಿಸಲಾಗಿದೆ.

ಈ ಪೋಟೋ ಶೂಟ್ ನಲ್ಲಿ ಹಿಂದೂ ಧರ್ಮದ ಪವಿತ್ರವಾದ ಋಷಿ ಪರಂಪರೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಋಷಿಯಂತೆ ವೇಷಧರಿಸಿದ ಈ ಯುವ ಜೋಡಿ ತೀರಾ ಅಸಹ್ಯ ಫೋಸ್ ನೀಡಿದ್ದು ಪೋಟೋಸ್ ವೈರಲ್ ಆಗುತ್ತಿದ್ದಂತೆ ಜನ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೋಟೋಶೂಟ್ ಹೆಸರಿನಲ್ಲಿ ಹಿಂದೂ ಧರ್ಮಿಯರ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಕೇರಳದ ರಿಗ್ವೆದಾ ಬೂಟಿಕ್ ಸಹಯೋಗದಲ್ಲಿ ನಡೆದ ಈ ಪೋಟೋಶೂಟ್ ನಲ್ಲಿ 1988 ರಲ್ಲಿ ‌ಮಲೆಯಾಳಂನಲ್ಲಿ ರಿಲೀಸ್ ಆದ ವೈಶಾಲಿ ಚಿತ್ರದ ಕಾನ್ಸೆಪ್ಟ್ ಬಳಸಲಾಗಿದೆ ಎನ್ನಲಾಗಿದೆ.

ಈ ಪೋಟೋಶೂಟ್ ನಲ್ಲಿ ಪಾಲ್ಗೊಂಡ ಜೋಡಿ ಅಭಿಜಿತ್ ಹಾಗೂ ಜಿತು ಮಕ್ಕು ಮಾಯಾ ಎಂದು ಹೇಳಲಾಗಿದ್ದು, ಇವರು ಮದುವೆಯಾಗ ಲಿರೋ ಜೋಡಿಯೋ ಅಥವಾ ಪ್ರೀ ವೆಡ್ಡಿಂಗ್ ಶೂಟ್ ಗಾಗಿ ಪೋಸು ಕೊಟ್ಟ ಆರ್ಟಿಸ್ಟ್ ಗಳೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಕೆಲದಿನಗಳ‌ ಹಿಂದೆ ಕೇರಳದ ಜೋಡಿಯೊಂದು ಕಾಫಿ ತೋಟದಲ್ಲಿ ನಡೆಸಿದ್ದ ಪೋಸ್ಟ್ ವೆಡ್ಡಿಂಗ್ ಹಸಿಬಿಸಿ ಪೋಸಿನ ಪೋಟೋ ಶೂಟ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಒಟ್ಟಿನಲ್ಲಿ ಮತ್ತೊಂದು ಪೋಟೋಶೂಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಆಕ್ರೋಶ ವ್ಯಕ್ತವಾಗಿದೆ.

- Advertisement -

Related news

error: Content is protected !!