Sunday, May 5, 2024
spot_imgspot_img
spot_imgspot_img

ಪುತ್ತೂರು: ಅಶೋಕ್‌ ರೈ ದುಡ್ಡು ಮಾಡಲು ರಾಜಕೀಯ ಬಂದಿದಲ್ಲ ಬಡ ಜನರ ಸೇವೆ ಮಾಡಲು ಬಂದಿದ್ದೇನೆ

- Advertisement -G L Acharya panikkar
- Advertisement -

ಐಟಿ ದಾಳಿ ಬಗ್ಗೆ ಅಶೋಕ್‌ ರೈ ಹೇಳಿದ್ದೇನು..!?

ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಕೆ. ಸುಬ್ರಹ್ಮಣ್ಯ ರೈ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ನಗದು ವಶ ಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೈಸೂರು ನಗರದ ಕೆ.ಸುಬ್ರಹ್ಮಣ್ಯ ರೈ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಂಗಳದ ಮರದಲ್ಲಿ ಬಚ್ಚಿಟ್ಟಿದ್ದ ಮಾವಿನ ಹಣ್ಣಿನ ಬಾಕ್ಸ್‌ಲ್ಲಿದ್ದ 1 ಕೋಟಿ ರೂ ನಗದು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮೈಸೂರು ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಜಪ್ತಿ ಮಾಡಿರುವುದು ಇದೇ ಮೊದಲು’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯೆ ನೀಡಿದ ಅಶೋಕ್‌ ರೈ:

ಅಶೋರ್ ರೈ ಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಮತ್ತು ನನ್ನ ಅತ್ಮಸ್ಥೆರ್ಯ ಕುಗ್ಗಿಸಲು ನನ್ನ ಮನೆ ಮೇಲೆ ಬಿಜೆಪಿಯವರು ಐಟಿ ದಾಳಿ ನಡೆಸಿದ್ದು, ಇಂತಹ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಿಟ್ಲದ ಚಂದಳಿಕೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಐಟಿ ರೈಡ್‌ ವಿಚಾರವನ್ನು ಹೇಳಿದರು

ನಾನು ಚುನಾವಣಾ ಪ್ರಚಾರದಲ್ಲಿದ್ದ ವೇಳೆ ನನ್ನ ಮನೆ ಮತ್ತು ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳು ಹಣಕ್ಕಾಗಿ ಜಾಲಾಡಿದ್ದು, ಮನೆಯಲ್ಲಿ ಕೇವಲ 30 ರೂ. ಮತ್ತು ಕಚೇರಿಯಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲು ಇಟ್ಟಿದ್ದ 1.80 ಲಕ್ಷ ರೂ. ಸಿಕ್ಕಿದ್ದು, ಅದನ್ನು ಕೊಂಡೊಯ್ದಿದ್ದಾರೆ. ಸತತ ಎರಡು ದಿನಗಳ ಕಾಲ ದಾಳಿ ನಡೆಸಿದ್ದಾರೆ. ನನ್ನನ್ನು ಹೇಗಾದರೂ ಮಾಡಿ ಜೈಲಿಗಟ್ಟಬೇಕು ಎಂದು ಈ ರೀತಿ ಮಾಡಲಾಗಿದೆ.

ಆದರೆ ದೇವರು ನನ್ನ ಕೈ ಬಿಟ್ಟಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಕೋಟ್ಯಾಂತರ ರೂ. ಆದಾಯ ತೆರಿಗೆ ಸರ್ಕಾರಕ್ಕೆ ಕಟ್ಟುತ್ತಿದ್ದೇನೆ. ದೇವರ ಮತ್ತು ಜನರ ಆಶೀರ್ವಾದ ಇರುವರೆಗೂ ನನ್ನನ್ನು ಈ ರೀತಿಯಾಗಿ ಹಣಿಯಲು ಯಾರಿಂದಲೂ ಸಾಧ್ಯವಿಲ್ಲ. ಅಶೋಕ್‌ ರೈ ದುಡ್ಡು ಮಾಡಲು ರಾಜಕೀಯ ಬಂದಿಲ್ಲ, ಬಡ ಜನರ ಸೇವೆ ಮಾಡಲು ರಾಜಕೀಯ ಪ್ರವೇಶಿಸಿದ್ದು ಎಂದರು.

- Advertisement -

Related news

error: Content is protected !!