Thursday, May 9, 2024
spot_imgspot_img
spot_imgspot_img

ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮ

- Advertisement -G L Acharya panikkar
- Advertisement -

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 77ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಡಳಿತ ಮಂಡಳಿಯ ನಿರ್ದೇಶಕ ಹಸನ್ ವಿಟ್ಲರವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಯೋಧ ಕೊಲ್ಯ ಹರೀಶ್.ಡಿ.ಶೆಟ್ಟಿಯವರು ತನ್ನ 18 ವರ್ಷಗಳ ಭೂ ಸೇನಾ ಅನುಭವಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯ ಸಂಸ್ಕಾರವಂತರಾಗುತ್ತಾ ದೇಶದ ಪ್ರಜೆಗಳಾಗಿ ಎಂದು ಸ್ವಾತಂತ್ರ ಉತ್ಸವಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಹಸನ್ ವಿಟ್ಲರವರು ತನ್ನ ಅಧ್ಯಕ್ಷೀಯ ಮಾತುಗಳಲ್ಲಿ ಸ್ವಾತಂತ್ರ್ಯಪೂರ್ವ ಹೋರಾಟದಲ್ಲಿ ಶ್ರೇಷ್ಠ ನಾಯಕರಲ್ಲದೆ ಅನೇಕ ಜನಸಾಮಾನ್ಯರು ಹೋರಾಟವನ್ನು ನಡೆಸಿದ್ದಾರೆ, ಯಾಕೆಂದರೆ ಜನಸಾಮಾನ್ಯರ ಹೃದಯದಲ್ಲಿ ದೇಶಪ್ರೇಮವಿತ್ತು ಅದೇ ಮುಂದಿವರಿದು ನಾವೆಲ್ಲಾ ದೇಶದ ರಕ್ಷಣೆಗೆ ಒಂದಾಗಬೇಕು, ಮುಂದಾಗಬೇಕು ಎಂದು ತಿಳಿಸಿದರು.

ಬಳಿಕ ಶಾಲಾ ನಾಯಕಿ ಸೃಜನಾ ರೈ, ವಿದ್ಯಾರ್ಥಿನಿ ಅಕ್ಷತಾ ಪೈ, ಮತ್ತು ಲಿಖಿತ ಇವರು ದಿನದ ಮಹತ್ವವನ್ನು ತಿಳಿಸಿದರು.ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 25ನೇ ವಿಶ್ವ ಜಂಬೂರಿಯಲ್ಲಿ ಭಾಗವಹಿಸಿದ ಅನುಭವಗಳನ್ನು ವಿದ್ಯಾರ್ಥಿಗಳಾದ ಸೃಜನಾ ರೈ ಹಾಗೂ ಅನೀಶ್ ಕೃಷ್ಣ ಆಚಾರ್ ವಿದ್ಯಾರ್ಥಿಗಳಿಗೆ ವಿವರಿಸಿದರು. ಶಿಶುವಿಹಾರದ ವಿದ್ಯಾರ್ಥಿಗಳ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆ ಆರ್ಷಣೀಯವಾಗಿತ್ತು. ಸ್ವಾತಂತ್ರ ದಿನಾಚರಣೆ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ, ಜೇಸಿ.ಪ್ರತಿಭಾ ಶ್ರೀಧರ್ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲ ಜಯರಾಮ ರೈ, ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳಿಂದ ದೇಶ ಪ್ರೇಮ ಸಾರುವ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆದು, ಇಂಪನ ಸ್ವಾಗತಿಸಿ, ನಿಶಾ ವಂದಿಸಿದರು. ವಿದ್ಯಾರ್ಥಿನಿ ರಾಶಿ ಜಿ. ಆರ್ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿ ಪೋಷಕರು, ಶಿಕ್ಷಕ – ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಸಾಕ್ಷಿಯಾದರು.

- Advertisement -

Related news

error: Content is protected !!