Thursday, April 18, 2024
spot_imgspot_img
spot_imgspot_img

ಪುತ್ತೂರು: ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕ್ಷೇತ್ರೀಯ ಸಂಘಟನಾ ಪ್ರಮುಖರಾದ ಜಗದೀಶ್ ಕಾರಂತ್ ರವರ ವಿರುದ್ಧ ಅವಹೇಳನಕಾರಿ ಸಂದೇಶ: ಹಿಂದೂ ಜಾಗರಣ ವೇದಿಕೆಯಿಂದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

- Advertisement -G L Acharya panikkar
- Advertisement -

ಪುತ್ತೂರು: ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕ್ಷೇತ್ರೀಯ ಸಂಘಟನಾ ಪ್ರಮುಖರಾದ ಜಗದೀಶ್ ಕಾರಂತ್ ಜೀ ರವರು ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು‌ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹಿಂದು ಜಾಗರಣ ವೇದಿಕೆ ಎಂಬುದು ಸಮಾಜಮುಖಿ ಸಂಘಟನೆಯಾಗಿದ್ದು, ಅತ್ಯಂತ ಶ್ರೇಷ್ಟವಾದ ರಕ್ತದಾನದಂತಹ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೇ, ಕೊರೋನ ವೈರಸ್ ಖಾಯಿಲೆ ಕಾಡುತ್ತಿರುವಂತಹ ಈ ಸಂಕಷ್ಟದ ಸಂದರ್ಭದಲ್ಲಿ ಆರ್ತರಿಗೆ ಸೂಕ್ತ ಅನ್ನ, ಬಟ್ಟೆ, ವಸತಿ ಮುಂತಾದ ಸೇವೆಗಳನ್ನು ಸಲ್ಲಿಸಿರುವುದು ಮಾತ್ರವಲ್ಲದೇ, ಕೊರೋನ ಭೀತಿಯಿಂದ ಮೃತದೇಹದ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರೇ ಹಿಂಜರಿಯುವಂತಹ ಸಂಧಿಗ್ಧ ಸಂದರ್ಭದಲ್ಲಿ, ಇಂತಹ ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಮಾಡಿ ಮಾನವೀಯತೆಯನ್ನು ಮೆರೆದಂತಹ ಸಂಘಟನೆಯಾಗಿದೆ.

ಹಿಂದೂ ಜಾಗರಣ ವೇದಿಕೆ ಎಂಬುದು, ದೇಶವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾದಂತಹ ಕಾಯಿಲೆ ಇರುವಾಗ ಜಾತಿ, ಮತ, ಭೇದ, ನೋಡದೇ ರಾತ್ರಿ ಹಗಲು ಎಂದು ಯೋಚಿಸದೇ, ಪ್ರಾಣವನ್ನೇ ಪಣವಾಗಿಟ್ಟು, ರೋಗಿಗಳ ಸೇವೆ ಮಾಡಿರುವ ಸಂಘಟನೆಯಾಗಿದೆ.

ಇಂತಹ ಸಂದರ್ಭದಲ್ಲಿ ಜಗದೀಶ್ ಕಾರಂತ್ ಜೀ ರವರು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕ್ಷೇತ್ರೀಯ ಸಂಘಟನಾ ಪ್ರಮುಖ ಆಗಿದ್ದು, ತನ್ನ ತನು, ಮನ, ಧನ, ಸರ್ವಸ್ವವನ್ನು, ಸಮಾಜಕ್ಕಾಗಿ ಅರ್ಪಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದಾರೆ ಮತ್ತು ನಿಸ್ವಾರ್ಥವಾಗಿ ದೇಶ ಸೇವೆ ಮಾಡಿದಂತಹ ಒಬ್ಬ ದೇಶ ಭಕ್ತನಾಗಿದ್ದು, ಅವರ ವಿರುದ್ಧ ಎ.೨೮ ರಂದು ರಾಜಕೀಯ ಸಮರ”ಎಂಬ ವಾಟ್ಸಾಪ್‌ಗ್ರೂಪ್‌ನಲ್ಲಿ ಬ್ರೇಕಿಂಗ್ ನ್ಯೂಸ್ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್‌ ಕಾರಂತ್‌ ಜೀ ಕೊರೋನ ಬಾಧಿಸಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಸಂದೇಶ ರವಾನಿಸಿದ್ದಾರೆ.

ಈ ಸಂದೇಶವನ್ನು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುವ ಮತ್ತು ಸಂಘಟನೆಯ ಪ್ರಮುಖರ ತೇಜೋವಧೆ ಮಾಡುವ, ಮಾತ್ರವಲ್ಲದೇ ಕೋವಿಡ್ -19ನಂತಹ ಮೇಲಿನ ಸುಳ್ಳು ಮಹಾಮಾರಿಯ ದೆಸೆಯಿಂದ ಸಮಾಜ ಕಂಗೆಟ್ಟಿರುವಾಗ ಜನರನ್ನು ಮತ್ತಷ್ಟು ಧೃತಿಗೆಡಿಸುವ ಮತ್ತು ಅವರ ಆತ್ಮಸೈರ್ಯ ಕುಗ್ಗಿಸುವ, ಸಮಾಜದ ಭಿನ್ನ ಕೋಮುಗಳ ಮಧ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಂಘರ್ಷ ಹುಟ್ಟು ಹಾಕುವ ರೀತಿಯಲ್ಲಿ, ಅನ್ಯಾನ್ಯ ಗುಂಪುಗಳ ಮಧ್ಯೆ ಸಂಘಟನೆಗಳ ಮಧ್ಯೆ ಗಲಭೆ ಹುಟ್ಟುವಂತೆ, ಸಾಮಾಜಿಕ ಸಾಮರಸ್ಯ, ಸ್ವಾಸ್ಥ್ಯ, ರೀತಿಯಲ್ಲಿ ಉದ್ರೇಕಿಸುವ ರೀತಿಯಲ್ಲಿ ಬಹಿರಂಗವಾಗಿ ಸಂದೇಶ ರವಾನಿಸಿರುತ್ತಾರೆ.

ಅನ್ಯ ಕೋಮುಗಳ ವಿರುದ್ಧ ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಸಂದೇಶಗಳನ್ನು ರವಾನಿಸಿ ಜನರನ್ನು ದಾರಿತಪ್ಪಿಸುವ ಹುನ್ನಾರ ಮಾಡಿರುತ್ತಾರೆ ಹಾಗೂ ಈ ಸಂದೇಶವನ್ನು ಅನ್ಯಕೋಮಿನ ಹಲವು ವ್ಯಕ್ತಿಗಳಿಗೆ ರವಾನಿಸಿ, ಇಲ್ಲ ಸಲ್ಲದ ಸುಳ್ಳು ಸಂದೇಶವನ್ನು ರವಾನಿಸಿ ಪರೋಕ್ಷವಾಗಿ ಸಂಘಟನೆಗಳ ವಿರುದ್ಧ ಜನರನ್ನು ಎತ್ತಿ ಕಟ್ಟಿರುತ್ತಾರೆ.

ಇದೂ ಅಲ್ಲದೆ ಈ ಹಿಂದೆ ಪುತ್ತೂರಿನಲ್ಲಿ ಹಿಂದೂ ಐಕ್ಯತಾ ಸಮಾವೇಶ ನಡೆದಂತಹ ಸಂದರ್ಭದಲ್ಲೂ ಮಾನ್ಯ ಜಗದೀಶ್ ಕಾರಂತ್ ಜೀ ರವರು ಭಾಷಣ ಮಾಡುತ್ತಾ ವೇದಿಕೆಯಲ್ಲಿ ಕುಸಿದು ಮೃತಪಟ್ಟಿದ್ದಾರೆಂದು ಸುಳ್ಳು ಸುದ್ದಿಯನ್ನು ರವಾನಿಸಲಾಗಿತ್ತು. ಈಗ ಮತ್ತೆ ಅದೇ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ.

ಆದ್ದರಿಂದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸದ್ರಿ ಮೇಲೆ ತಿಳಿಸಿದ ಸುಳ್ಳು ಸಂದೇಶವನ್ನು ನಮ್ಮ ಸಂಘಟನೆಯ ಮಾನಹಾನಿ ಮಾಡುವ ಮತ್ತು ನಮ್ಮ ಸಂಘಟನೆಯ ನಿಷ್ಕಲ್ಮಶವಾದಂತಹ ಚಾರಿತ್ರಕ್ಕೆ ಮಸಿ ಬಳಿಯುವ ಮತ್ತು ಸಮಾಜದಲ್ಲಿ ನಮ್ಮ ಸಂಘಟನೆಯನ್ನು ಗೌರವಿಸುವ, ಮೆಚ್ಚುವ ಸಾರ್ವಜನಿಕರಲ್ಲಿ ಸಂಘಟನೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ, ಮಾತ್ರವಲ್ಲದೆ ಸಮಾಜದಲ್ಲಿ ಗುಂಪುಗಾರಿಕೆಯನ್ನು ಹುಟ್ಟು ಹಾಕಿ ಗುಂಪುಗಳ ಮಧ್ಯೆ ವೈಷಮ್ಯವನ್ನು, ದ್ವೇಷವನ್ನು ಹುಟ್ಟುಹಾಕುವ ಏಕೈಕ ಉದ್ದೇಶದಿಂದ, ಸುಳ್ಳು ಸಂದೇಶವನ್ನು ಉದ್ದೇಶಪೂರ್ವಕವಾಗಿ ರವಾನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ದೂರಿನಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!