Monday, June 8, 2026
spot_imgspot_img
spot_imgspot_img

ಮಂಗಳೂರು: ಡ್ರಗ್ಸ್ ನಶೆಯಲ್ಲಿದ್ದ ತಂಡದಿಂದ ವಿದ್ಯಾರ್ಥಿಯನ್ನು ಅಪಹರಿಸಿ, ಹಿಗ್ಗಾಮುಗ್ಗ ಥಳಿತ; ಓರ್ವ ಆರೋಪಿ ಅರೆಸ್ಟ್..!

- Advertisement -
- Advertisement -

ಮಂಗಳೂರು: ಡ್ರಗ್ಸ್ ನಶೆಯಲ್ಲಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿಯೋರ್ವನಿಗೆ ಹಿಗ್ಗಾಮುಗ್ಗ ಥಳಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮಂಗಳೂರಿನ ಅಡ್ಯಾರ್ ಬಳಿ ನಡೆದಿದೆ.

ನಗರದ ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗೆ ಬಲ್ಮಠದ ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ 18 ವರ್ಷದ ಇಬ್ರಾಹಿಂ ಫಾಹಿಂಗೆ ಎಸ್‌ಡಿಪಿಐ ಮುಖಂಡ ಅನ್ವರ್ ಸಾದತ್ ನ ಪುತ್ರ ಅನಾನ್ ಹಾಗೂ ತಹೀಶ್ ನ ನೇತೃತ್ವದ ತಂಡದಿಂದ ಈ ಹಲ್ಲೆ ನಡೆದಿದೆ.

ಮುಸ್ಲಿಂ ಹುಡುಗಿಯ ವಿಚಾರಕ್ಕೆ ಇಬ್ರಾಹಿಂ ಫಾಹಿಂನನ್ನು ಕಿಡ್ನಾಪ್ ಮಾಡಿದ ತಂಡ ನಗರದ ಹೊರವಲಯದ ಅಡ್ಯಾರ್ ನ ಫ್ಲಾಟ್‌ವೊಂದರಲ್ಲಿ ಕೂಡಿ ಹಾಕಿದ್ದು, ಗಾಂಜಾನಶೆಯಲ್ಲಿದ್ದ ಆರೋಪಿಗಳು ವಿದ್ಯಾರ್ಥಿ ಇಬ್ರಾಹಿಂ ಫಾಹಿಂನ ಮೇಲೆ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!