





ವಿಟ್ಲದಲ್ಲಿ ಸಮಯಪಾಲನೆ ಮಾಡದೆ ಬೇಕಾಬಿಟ್ಟಿ ಓಡಿಸುತಿದ್ದ ಜೈನ್ ಬಸ್ ಡ್ರೈವರ್‌ಗೆ ಮಂಗಳೂರಿನಲ್ಲಿ ಗೂಸಾ ಬಿದ್ದ ವಿಡಿಯೋ ವೈರಲ್ ಆಗಿದೆ.


ಇತ್ತೀಚೆಗೆ ವಿಟ್ಲ ಬಸ್‌ಸ್ಯ್ಟಾಂಡ್‌ನಲ್ಲಿ ತನಗೆ ಮನ ಬಂದಂತೆ ಸಮಯ ಪಾಲನೆ ಮಾಡದೆ ಬಸ್ ಓಡಿಸುತಿದ್ದ ಜೈನ್ ಬಸ್ ಡ್ರೈವರ್ ಅಧಿಕಾರಿಗಳನ್ನು ಮಂಗ ಮಾಡಿ ಯಾವುದೋ ನಕಲಿ ಪರ್ಮಿಟ್‌ನ್ನು ತೋರಿಸಿ ಇತರ ಬಸ್ ನವರಿಗೆ ತೊಂದರೆ ಮಾಡುತಿದ್ದ ಎಂದು ತಿಳಿದು ಬಂದಿದೆ.
ಇದೇ ಚಾಳಿಯನ್ನು ಈತ ಮಂಗಳೂರಿನಲ್ಲಿ ಕೂಡ ಮಾಡಿದ್ದು ಅಲ್ಲಿಯ ಬಸ್ ಡ್ರೈವರ್ ಎಜೆಂಟ್‌ಗಳು ಸೇರಿ ಈತನಿಗೆ ಗೂಸಾ ನೀಡಿ ಬುದ್ದಿ ಕಲಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ಅಲ್ಲದೇ ಈತ ವಿಟ್ಲದಿಂದ ಕಲ್ಲಡ್ಕ ಮಾರ್ಗವಾಗಿ ಮಂಗಳೂರಿಗೆ ಹೋಗುವಾಗ ಬಸ್ ಮಾತ್ರವಲ್ಲದೆ ಇತರ ವಾಹನಗಳಿಗೂ ಸೈಡ್ ಕೊಡದೇ ಬಸ್ ಸ್ಟಾಪ್‌ಗಳಲ್ಲಿ ಮಾರ್ಗದ ಮದ್ಯೆ ಬಸ್ ನಿಲ್ಲಿಸಿ ಸಾರಿಗೆ ನಿಯಮವನ್ನು ಉಲ್ಲಂಘಿಸಿದ ವೀಡಿಯೋವನ್ನು ಸಾರ್ವಜನಿಕರು ಅಧಿಕಾರಿಗಳಿಗೆ ಕಳುಹಿಸಿ ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ.
ರಸ್ತೆ ಮದ್ಯದಲ್ಲಿ ಬಸ್ ನಿಲ್ಲಿಸುವ ಚಾಳಿಯನ್ನು ಈತ ಇನ್ನು ಮುಂದೆ ಬಿಡದೆ ಇದ್ದಲ್ಲಿ ಸಾರ್ವಜನಿಕರಿಂದ ಈತನಿಗೆ ತಕ್ಕ ಉತ್ತರ ಸಿಗಲಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ.