Thursday, April 25, 2024
spot_imgspot_img
spot_imgspot_img

ಸ್ನೇಹಿತರ ಜತೆ ಸೇರಿ ಹೆಂಡತಿಯ ಮೇಲೇ ಗ್ಯಾಂಗ್ ರೇಪ್ ಮಾಡಿದ ಗಂಡ

- Advertisement -G L Acharya panikkar
- Advertisement -

ಜೈಪುರ: ಹೆಂಡತಿಯ ಮೇಲೆ ಸಹೋದ್ಯೋಗಿ ಸ್ನೇಹಿತರ ಜತೆ ಸೇರಿ ಪತಿಯೇ ಗ್ಯಾಂಗ್​ ರೇಪ್​ ಮಾಡಿರುವ ಘಟನೆ ರಾಜಸ್ಥಾನದ ಜಲೋರ್​ನಲ್ಲಿ ನಡೆದಿದೆ. ಒಳ್ಳೆಯ ಅಳಿಯ ಎಂದು ನಂಬಿದ್ದ ವ್ಯಕ್ತಿಯೇ ಮಗಳ ಮೇಲೆ ಈ ರೀತಿಯ ದುಷ್ಕೃತ್ಯ ನಡೆಸಿರುವುದನ್ನು ಕಂಡು ಬೆಚ್ಚಿ ಬಿದ್ದಿರುವ ಸಂತ್ರಸ್ತೆಯ ತಂದೆ ತಾಯಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಸಿರೋಹಿಯ ಮಂದರ್​ನ ಕಂಪನಿಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ, ಆತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಜನವರಿ 12 ರಂದು ಸಂಜೆ ಮನೆಗೆ ಬಂದ ಆತ ಹೆಂಡತಿಯನ್ನು ತನ್ನ ಬೈಕ್​ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿದ್ದ ಬಂಗಲೆಯೊಂದಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ, ಆಕೆಯ ಕಾಲುಗಳನ್ನು ಕಬ್ಬಿಣದ ಬಾಗಿಲಿಗೆ ಕಟ್ಟಿದ್ದಾನೆ. ನಂತರ ಕುಡಿದ ಮತ್ತಿನಲ್ಲಿದ್ದ ತನ್ನ ಮೂವರು ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್​ ರೇಪ್​ ಮಾಡಿದ್ದಾನೆ. ಅಲ್ಲಿಂದ ಆಕೆಯನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಆದರೆ ಗ್ಯಾಂಗ್​ರೇಪ್​ನಿಂದಾಗಿ ಅಸ್ವಸ್ಥಳಾಗಿದ್ದ ಮಹಿಳೆ ಹಾಸಿಗೆ ಹಿಡಿದಿದ್ದಾಳೆ. ಮಾರನೇ ದಿನ ಆಕೆಯ ಅಪ್ಪ ಅಮ್ಮ ಮನೆಗೆ ಬಂದಿದ್ದು, ಆಗ ನಡೆದ ವಿಚಾರಗಳು ಅವರಿಗೆ ತಿಳಿದುಬಂದಿದೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಳಿಯನ ವಿರುದ್ಧ ಪೊಲೀಸ್​ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

- Advertisement -

Related news

error: Content is protected !!