Sunday, April 28, 2024
spot_imgspot_img
spot_imgspot_img

ನೀರು ಪೋಲು ಮಾಡಿದವರಿಗೆ ದಂಡ ವಿಧಿಸಿದ ಜಲಮಂಡಳಿ: 1 ಲಕ್ಷಕ್ಕೂ ಹೆಚ್ಚು ವಸೂಲಿ

- Advertisement -G L Acharya panikkar
- Advertisement -

ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆ ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದವರಿಗೆ ಮತ್ತು ಪೋಲು ಮಾಡಿದವರಿಗೆ ದಂಡ ವಿಧಿಸುವುದಾಗಿ ಜಲಮಂಡಳಿ ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರೀತಿಯಾಗಿ ನೀರು ವ್ಯರ್ಥ ಮಾಡಿದರೆ 5 ಸಾವಿರ ರೂ. ದಂಡ ನಿಗದಿ ಮಾಡಲಾಗಿತ್ತು.

ಇದೀಗ ನಗರದಲ್ಲಿ ಈವರೆಗೆ ಬರೋಬ್ಬರಿ 1 ಲಕ್ಷದ 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಬೋರ್​ವೆಲ್, ನಲ್ಲಿ ನೀರನ್ನು ವಾಹನ ತೊಳೆಯಲು, ರಸ್ತೆಗೆ ಸುರಿದವರು, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ದಂಡ ವಿಧಿಸಲಾಗಿದೆ.

ನೀರು ಪೋಲು ತಡೆಗೆ ಮಾರ್ಚ್‌ 21 ರಿಂದ ಮಾರ್ಚ್ 31ರ ಒಳಗೆ ನಲ್ಲಿಗಳಿಗೆ ವಾಟರ್‌ ಟ್ಯಾಪ್ ಮಾಸ್ಕ್‌ ಅಂದ್ರೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನಗರದಲ್ಲಿ ಪರವಾನಗಿ ಹೊಂದಿದ 1,500 ಪ್ಲಂಬರ್‌ಗಳಿದ್ದು, ಏರಿಯೇಟರ್ ಅಳವಡಿಕೆಗೆ ಜಾಗೃತಿ ಮೂಡಿಸಬೇಕಿದೆ. ಏರಿಯೇಟರ್‌ ಅಳವಡಿಸುವುದರಿಂದ ಶೇಕಡಾ 60 ರಿಂದ 85 ರಷ್ಟು ನೀರಿನ ಉಳಿತಾಯ ಮಾಡಬಹುದಾಗಿದೆ.

- Advertisement -

Related news

error: Content is protected !!