Thursday, June 18, 2026
spot_imgspot_img
spot_imgspot_img

ಪುತ್ತೂರು: ಧರೆಗುರುಳಿದ ಬೃಹತ್‌ ಮಾವಿನ ಮರ : ಕೆಲವು ವಾಹನಗಳು ಜಖಂ

- Advertisement -
- Advertisement -
This image has an empty alt attribute; its file name is shri-energy-solar-667x1024.jpeg

ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರೀ ಗಾತ್ರದ ಮಾವಿನ ಮರವೊಂದು ಶನಿವಾರ ಧರಶಾಯಿಯಾದ ಘಟನೆ ಸಂಭವಿಸಿದೆ.

ಬಿದ್ದ ಮರದಲ್ಲಿದ್ದ ಮಾವಿನ ಕಾಯಿಗಳನ್ನು ಕೊಯ್ಯಲು ಜನ ಮುಗಿ ಬಿದ್ದಿದ್ದರು. ಸದಾ ಜನರ ಸಂಪರ್ಕದಲ್ಲಿರುವ ಈ ಸ್ಥಳದಲ್ಲಿ -ಮರ ಬಿದ್ದ ಸಂದರ್ಭ ಯಾರೂ ಇಲ್ಲದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮರದ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಒಂದು ಟೆಂಪೋ ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಘಟನಾಸ್ಥಳಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಅಂಬಂಧಪಟ್ಟ ಅಧಿಕಾರಿಗಳಿಗೆ ಮರ ತೆರವುಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ.

- Advertisement -

Related news

error: Content is protected !!