Wednesday, June 17, 2026
spot_imgspot_img
spot_imgspot_img

ಎನ್ ಕೌಂಟರ್’ಗೆ ಇಬ್ಬರು ಉಗ್ರರು ಬಲಿ

- Advertisement -
- Advertisement -

ಶ್ರೀನಗರ: ಲಷ್ಕರ್-ಇ-ತೊಯ್ಬಾ/ರೆಸಿಸ್ಟೆಂಟ್ ಫ್ರಂಟ್ ಉಗ್ರಗಾಮಿ ಸಂಘಟನೆಗಳ ಇಬ್ಬರು ಉಗ್ರಗಾಮಿಗಳು ನಸುಕಿನ ಜಾವ ಶ್ರೀನಗರದ ರೈನವರಿ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದಾರೆ. ಹತ್ಯೆಗೀಡಾದ ಇಬ್ಬರು ಉಗ್ರರು ಇತ್ತೀಚಿನ ದಿನಗಳಲ್ಲಿ ನಾಗರಿಕರ ಹತ್ಯೆ ಸೇರಿದಂತೆ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ತಿಳಿಸಿದ್ದಾರೆ.

ಸ್ಥಳದಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೀಡಾದ ಉಗ್ರರಲ್ಲಿ ಓರ್ವ ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು ಈತ ಈ ಹಿಂದೆ ಪತ್ರಕರ್ತನಾಗಿದ್ದು ಆನ್ ಲೈನ್ ನ್ಯೂಸ್ ಪೋರ್ಟಲ್ ವ್ಯಾಲಿ ನ್ಯೂಸ್ ಸರ್ವಿಸ್ ಎಂಬುದನ್ನು ಅನಂತ್ ನಾಗ್ ನಲ್ಲಿ ನಡೆಸುತ್ತಿದ್ದ. 2021ರಲ್ಲಿ ಕಳೆದ ವರ್ಷ ಆತನನ್ನು ಉಗ್ರ ಎಂದು ಘೋಷಣೆ ಮಾಡಲಾಗಿತ್ತು. ಈತನ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದ್ದವು. ಇನ್ನೊಬ್ಬ ಉಗ್ರನನ್ನು ಬಿಜ್ಬೆಹರದ ಹಿಲಾಲ್ ಅಹ್ ರಾ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!