Tuesday, July 2, 2024
spot_imgspot_img
spot_imgspot_img

ವಿಟ್ಲ: ಬಿಜೆಪಿ ವತಿಯಿಂದ ಜನಸಂಘ ಸ್ಥಾಪಕಾಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಭಾರತೀಯ ಜನತಾ ಪಾರ್ಟಿ ವತಿಯಿಂದ ಜನಸಂಘ ಸ್ಥಾಪಕಾಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಕುಂಡಡ್ಕ ಇಡ್ಕಿದು ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.

ಚಂದ್ರಶೇಖರ ಬಪ್ಪಳಿಗೆ, ಬಿಜೆಪಿ ಪುತ್ತೂರು ಮುಖಂಡರು ದೀಪ ಬೆಳಗಿಸಿ ದಿ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಇವರು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕೆಲಸ ಕಾರ್ಯಗಳಿಗೂ ಪ್ರೇರಣೆ ಶ್ಯಾಮ್‌ ಪ್ರಸಾದ್ ಮುಖರ್ಜಿಯರವರು, 1901 ಜುಲೈ 5 ರಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾದಲ್ಲಿ ಜನಿಸಿದರು. ಹಿಂದೂ ಸಮಾಜಕ್ಕೆ ತೊಂದರೆ ಅನುಭವಿಸಿದ ಕಾರಣ 1950 ಎಪ್ರಿಲ್ 8 ರಂದು ಮೊದಲ ಕ್ಯಾಬಿನೆಟ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಹೊಸ ರಾಜಕೀಯ ಪಕ್ಷಕ್ಕೆ ಮುನ್ನುಡಿ ಬರೆದವರು ಮುಖರ್ಜಿಯವರು, 1951 ಅಕ್ಟೋಬರ್ 21 ರಂದು ಜನಸಂಘ ಎನ್ನುವ ಪಕ್ಷವನ್ನು ಹುಟ್ಟುಹಾಕ್ತಾರೆ. 1952 ನೇ ದೇಶದ ಪ್ರಥಮ ಮಹಾಚುನಾವಣೆಯ ಸಂದರ್ಭದಲ್ಲಿ ಮುಖರ್ಜಿಯರವ ಜನಸಂಘ ಮೂರು ಸೀಟುಗಳನ್ನು ಗೆದ್ದು ಬರ್ತದೆ. ಇದೇ ಮುಂದುವರೆದು ಇಂದು ಭಾರತೀಯ ಜನಪಾ ಪಾರ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ ಕಾಶ್ಮೀರಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಗೈದ ಮುಖರ್ಜಿಯವರ ಜೀವಚರಿತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.

ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್ ಮಾತನಾಡಿ ‘ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರೆಯ ಮಾನವತಾವಾದವನ್ನು ಅಚಲವಾಗಿ ನಂಬಿಕೊಂಡವರು. ಹಿಂದುತ್ವವನ್ನು ಈ ದೇಶದ ಪ್ರತಿಯೊಂದು ಮೂಲೆಗೆ ಉದ್ದೀಪನಗೊಳಿಸುವುದರ ಜೊತೆಗೆ ರಾಷ್ಟ್ರಪ್ರೇಮವನ್ನು ಮೂಡಿಸಿದವರು ಪ್ರಾರಂಭದ ಹಂತದಲ್ಲಿ ಈ ದೇಶದ ಪರಿಸ್ಥಿತಿಯನ್ನು ಮನಗಂಡು, ಈ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಬೇಕೆಂದು ಶ್ರಮ ವಹಿಸಿದವರು. ಜನಸಂಘದ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಹುಟ್ಟುಹಾಕಿದವರು, ಇವರ ಈ ಶ್ರಮದ ಫಲವಾಗಿ ಇಂದು ನಾವೆಲ್ಲರೂ ತಾಯಿ ಭಾರತಿಯನ್ನು ಜಗತ್ತಿಗೆ ಗುರುವಾಗಿ ಸ್ವೀಕರಿಸುವ ಕಾಲಘಟ್ಟದಲ್ಲಿ ಇರುವುದು ನಿಜಕ್ಕೂ ತುಂಬಾ ಹೆಮ್ಮೆ ಅಂದು ಅವರು ಗೈದ ಶ್ರಮ, ತ್ಯಾಗ, ಮಾರ್ಗದರ್ಶನದಂತೆ ಇಂದು ನಾವೆಲ್ಲರೂ ಪಕ್ಷವನ್ನು ಇನ್ನಷ್ಟು ಕಟ್ಟಿ ಬೆಳೆಸಿ ತಾಯಿ ಭಾರತಾಂಬೆಗೆ ರಕ್ಷಣೆಯಾಗೋಣ ಎಂದು ಹೇಳಿದರು

ವೇದಿಕೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರು ಗೋವಿಂದರಾಜು, ವಿಟ್ಲ ಮುಡ್ನೂರು ಪಂಚಾಯತ್ ಉಪಾಧ್ಯಕ್ಷರು ರೋಹಿಣೆ, ವ್ಯವಸಾಯ ಸೇವಾ ಸಂಘ ವಿಟ್ಲ ಉಪಾಧ್ಯಕ್ಷರು ಮಹಾಬಲೇಶ್ವರ ಭಟ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈ ದಿನದ ಸವಿ ನೆನಪಿಗಾಗಿ ಸುಮಾರು 60 ಗಿಡಗಳನ್ನು ವಿತರಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರಮಾ‌ರ್ ಸ್ವಾಗತಿಸಿ, ಶಕ್ತಿ ಶಕ್ತಿ ಕೇಂದ್ರದ ಪ್ರಮುಖರು ಗೋವಿಂದರಾಜು ಧನ್ಯವಾದಗೈದರು
.

- Advertisement -

Related news

error: Content is protected !!