- Advertisement -
- Advertisement -
ಕನ್ನಡದ ಪರ್ಲ್ ಬಕ್ ಬಿರುದಾಂಕಿತೆ ಹಿರಿಯ ಕಾದಂಬರಿಗಾರ್ತಿ ಲಲಿತಾ ಆರ್ ರೈ ಅವರಿಗೆ ಅರ್ಪಣೆ



ಹಿರಿಯ ಚೇತನವಿದು
ಲಲಿತಮ್ಮ ನೀವು
ಆದರ್ಶದ ಗುರಿಯ
ಬಾಳಿದಿರಿ ಎಂದು
ನೂರ್ಕಾಲ ಸುಖವಾಗಿ
ಬಾಳಿರಿ ಎಂದೆಂದೂ
ಆ ದೇವ ಇತ್ತಿಹನು
ಈ ಕಾಯವನ್ನು
ಕಷ್ಟಕಾರ್ಪಣ್ಯಗಳ
ಲೆಕ್ಕಿಸದೇ ನೀವು
ಮುಂದಡಿಯ ಇಡುವಿಕೆ
ಬಾಳಲ್ಲಿ ಛಲವು
ದೇವರೇ ಆತ್ಮವು
ನಂಬಿದ ಬದುಕು
ಬೆಂಕಿಯ ಕುಲುಮೆಗೆ
ಸ್ಫುಟವಿಟ್ಟ ರೀತಿಯು
ಒಲವಿನ ಬಳ್ಳಿಯ
ಕಾಯೊಳಗೆ ರೂಪ
ಘಟಿಸುವುದು ದಿನಾ
ಅವನೆಣಿಕೆಯ ರೀತಿ
ಮಣ್ಣಿನ ಈ ಕಾಯ
ಅತ್ಯಂತ ಶ್ರೇಷ್ಠವು
ಒದಗಿಹುದು ನಿಮಗಿಂದು
ತೊಂಬತ್ತಾರರ ಹರೆಯವು
✍🏻 ಮಲ್ಲಿಕಾ ಜೆ ಆರ್ ರೈ ಪುತ್ತೂರು
- Advertisement -