Sunday, May 19, 2024
spot_imgspot_img
spot_imgspot_img

ಜಯಕರ್ನಾಟಕ ಜನಪರ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ಬೆಂಗಳೂರು : ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ನಾಡು, ನುಡಿ, ಗಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಸಂಘಟನೆಗಳ ದೊಡ್ಡ ಪರಂಪರೆಯೇ ಇದೆ. ಮೈಸೂರು ಅರಸರ ಬೆಂಬಲದೊಂದಿಗೆ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಇಂತಹ ಉದ್ದೇಶದ ಮುಂದುವರಿಕೆಗಾಗಿ ನಾಡನಲ್ಲಿ ಅನೇಕ ಸಂಘ, ಸಂಸ್ಥೆಗಳು ಹುಟ್ಟಿಕೊಂಡಿವೆ ಅಂತಹ ಸಂಸ್ಥೆಗಳ ಸಾಲಿಗೆ ಜಯ ಕರ್ನಾಟಕ ಜನಪರ ವೇದಿಕೆ ಸೇರ್ಪಡೆಯಾಗಿದೆ.

ಜಯಕರ್ನಾಟಕ ಜನಪರ ವೇದಿಕೆಯ ಮುಖ್ಯ ಸಲಹೆಗಾರ ಬಿ. ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಗುಣರಂಜನ್ ನಾಡು, ನುಡಿ ವಿಷಯದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಮುಂಚೂಣಿಯಲ್ಲಿ ನಿಂತು ಹೋರಾಡಲಿದೆ. ಕನ್ನಡದ ಯಾವುದೇ ರೀತಿಯ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ವಂದಿಸುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಕನ್ನಡಿಗರ ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ಸಂಘ ಹೋರಾಟ ನಡೆಸಲು ಸಿದ್ದವಿದೆ. ಈ ವಿಷಯದಲ್ಲಿ ಯಾವುದೇ ಹಂತದಲ್ಲೂ ಹೋರಾಟಗಳನ್ನು ರೂಪಿಸಲು, ಸಂಘಟಿಸಲು ಸಿದ್ಧ ಎಂದರು.

ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು: ಪ್ರಧಾನ ಸಂಚಾಲಕರನ್ನಾಗಿ ಆರ್. ಚಂದ್ರಪ್ಪ, ಬೆಂಗಳೂರು ಜಿಲ್ಲಾಧ್ಯಕ್ಷರನ್ನಾಗಿ ಜೆ. ಶ್ರೀನಿವಾಸ, ಬೆಂಗಳೂರು ಜಿಲ್ಲೆಯ ಮಹಿಳಾಧ್ಯಕ್ಷರನ್ನಾಗಿ ರತ್ನಮ್ಮ, ಬೆಂಗಳೂರು ಜಿಲ್ಲೆಯ ಹೋರಾಟ ಸಮಿತಿಯ ಅಧ್ಯಕ್ಷರನ್ನಾಗಿ ಬಿ.ಎಂ. ಸುರೇಶ್ ರೈ. ಬೆಂಗಳೂರು ಜಿಲ್ಲೆಯ ಆಟೋ ಘಟಕದ ಅಧ್ಯಕ್ಷರನ್ನಾಗಿ ಜಯರಾಮ್, ಸಂಚಾಲನ ಸಮಿತಿ ಸದಸ್ಯರಾಗಿ ಶೆ. ಭೋ. ರಾಧಾಕೃಷ್ಣ. ಟಿ. ಪ್ರಕಾಶ್ ಗೌಡ, ವೀರಭದ್ರೇ ಗೌಡ, ಬಾಲಚಂದರ್, ಬೆಂಗಳೂರು ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾದೇಶ್ ಗೌಡ,ನಾರಾಯಣ (ನೀಲಕಂಠ ಗೌಡ), ಹರೀಶ್ ರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!