- Advertisement -
- Advertisement -
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಅವರ ವೇದ ನಿಲಯಂನ್ನು ನೆನೆಪಿನ ಸ್ಮಾರಕ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಚರಾಸ್ತಿಯನ್ನು ತಮಿಳುನಾಡು ಸರ್ಕಾರ ವಶಕ್ಕೆ ತೆಗೆದುಕೊಂಡಿದೆ.

ಮಾಜಿ ಸಿಎಂ ದಿ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ಸುಮಾರು 4 ಕೆ.ಜಿ ಚಿನ್ನ, 601 ಕೆಜಿ ಬೆಳ್ಳಿ, 29 ಟೆಲಿಫೋನ್ 8,300ಕ್ಕೂ ಹೆಚ್ಚು ಪುಸ್ತಕಗಳು, 10,438 ಉಡುಗೆ ಸಾಮಾಗ್ರಿಗಳು, ಬಟ್ಟೆ, ಪೂಜಾ ವಸ್ತುಗಳು ಚರಾಸ್ತಿಗಳ ಪಟ್ಟಿಯಲ್ಲಿವೆ.

ಮಾಜಿ ಸಿಎಂ ದಿ.ಜಯಲಲಿತಾ 2016ರ ಡಿಸೆಂಬರ್ ನಲ್ಲಿ ಕೊನೆಯುಸಿರೆಳೆಯುವ ಮುನ್ನ ಮೂರು ಅಂತಸ್ತಿನ ಕಟ್ಟಡವಾದ ವೇದ ನಿಲಯಂನಲ್ಲಿ ವಾಸವಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರವು 2017ರಲ್ಲಿ ಐಷಾರಾಮಿ ಆಸ್ತಿಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲಾಗುವುದು ಎಂದು ಘೋಷಿಸಿತ್ತು. ಹೀಗಾಗಿ ಸರ್ಕಾರ ಜಯಲಲಿತಾ ಅವರ ಚರಾಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇನ್ನು ನೆನಪಿನ ಸ್ಮಾರಕ ನಿರ್ಮಾಣದ ನೇತೃತ್ವವನ್ನು ಸಿಎಂ ಕೆ.ಪಳನಿಸ್ವಾಮಿ ವಹಿಸಲಿದ್ದಾರೆ.

- Advertisement -