

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ ಇಲ್ಲಿ ದಿನಾಂಕ 21.06.2022 ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಇಲಾಖೆಯ ಆದೇಶದಂತೆ ವಿದ್ಯಾರ್ಥಿಗಳು ಆಸನ, ಪ್ರಾಣಾಯಾಮ, ಧ್ಯಾನಾದಿಗಳನ್ನು ನುರಿತ ಯೋಗ ಗುರುಗಳ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಯೋಗ ಗುರುಗಳಾದ ಕುಶಲ ಎಂ ಹಾಗೂ ಯೋಗಪಟು ಸಂಜೀವ ಪೂಜಾರಿ ಇವರು ಪ್ರೌಢ ಮತ್ತು ಪ್ರಾಥಮಿಕ ವಿಭಾಗಗಳಲ್ಲಿ ಉದ್ಘಾಟನೆ ನೆರವೇರಿಸಿ ಯೋಗವು ನಮ್ಮ ದೇಶದ ಋಷಿಮುನಿಗಳಿಗೆ ವರದಾನವಾಗಿದೆ ಇದನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಇಂದು ಜಗತ್ತಿನ ಶೇಕಡ ತೊಂಬತ್ತರಷ್ಟು ದೇಶಗಳು ವಿಶ್ವ ಯೋಗ ದಿನವನ್ನು ಆಚರಿಸುತ್ತಿದೆ. ಅಲ್ಲದೆ ಇಂದು ಅತ್ಯಂತ ದೀರ್ಘವಾದ ಹಗಲು, ಉತ್ತರಾಯಣದ ಕೊನೆಯ ದಿನ ಎಂಬುದಾಗಿ ಈ ದಿನದ ವಿಶೇಷತೆಯನ್ನು ತಿಳಿಸಿದರು.

ಅಷ್ಟ ಅಂಗಗಳ ಮುಖಾಂತರ ಮನುಷ್ಯ ತನ್ನ ಆಧ್ಯಾತ್ಮಿಕ,ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಬಹುದು ಎಂದು ಯೋಗದ ಮಹತ್ವವನ್ನು ತಿಳಿಸಿದರು. ಒಳಾoಗಣ ಯೋಗಾಸನವನ್ನು ವಿವಿಧ ವಿಭಾಗಗಳನ್ನಾಗಿಸಿ ತರಬೇತಿಯನ್ನು ನೀಡಲಾಯಿತು.
ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಶಾಲಾ ಹೊರಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ವ್ಯಾಯಾಮವನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಯ ಸಂಭ್ರಮಕ್ಕೆ ಮೆರುಗು ಕೊಟ್ಟರು.

ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ಹಾಗೂ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ ರವರು ಯೋಗ ತರಬೇತುದಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾ ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ ಹಾಗು ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
- ವಿಟ್ಲ: ಸ್ಮಾರ್ಟ್ ಸೆಲೆಕ್ಷನ್ ಡ್ರೆಸ್ ಶಾಪ್ನಲ್ಲಿ ದರಕಡಿತ ಮಾರಾಟ: ವಿಶೇಷ ಆಫರ್
- ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು..!
- ವಕ್ಫ್ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ: ಮಾಜಿ ಸಿಎಂ ಬೊಮ್ಮಾಯಿ ವಿರುದ್ಧದ ಎರಡು ಕೇಸ್ ರದ್ದು..!
- ಧರ್ಮಸ್ಥಳ: ಹೆಣ ಹೂತಿದ್ದ ಸ್ಥಳಗಳನ್ನು ಗುರುತು ಮಾಡ್ತೇನೆ ಹೇಳಿದ್ದ ಅಪರಿಚಿತ ವ್ಯಕ್ತಿ: ಎಸ್ಪಿ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ ವಕೀಲರ ತಂಡ..!!
- ಉಚಿತ ಟಿಕೆಟ್ ಘೋಷಣೆಯಿಂದ ಕಾಲ್ತುಳಿತ: ದಯಾನಂದ್
