Friday, March 29, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ ಇಲ್ಲಿ ದಿನಾಂಕ 21.06.2022 ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಇಲಾಖೆಯ ಆದೇಶದಂತೆ ವಿದ್ಯಾರ್ಥಿಗಳು ಆಸನ, ಪ್ರಾಣಾಯಾಮ, ಧ್ಯಾನಾದಿಗಳನ್ನು ನುರಿತ ಯೋಗ ಗುರುಗಳ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಯೋಗ ಗುರುಗಳಾದ ಕುಶಲ ಎಂ ಹಾಗೂ ಯೋಗಪಟು ಸಂಜೀವ ಪೂಜಾರಿ ಇವರು ಪ್ರೌಢ ಮತ್ತು ಪ್ರಾಥಮಿಕ ವಿಭಾಗಗಳಲ್ಲಿ ಉದ್ಘಾಟನೆ ನೆರವೇರಿಸಿ ಯೋಗವು ನಮ್ಮ ದೇಶದ ಋಷಿಮುನಿಗಳಿಗೆ ವರದಾನವಾಗಿದೆ ಇದನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಇಂದು ಜಗತ್ತಿನ ಶೇಕಡ ತೊಂಬತ್ತರಷ್ಟು ದೇಶಗಳು ವಿಶ್ವ ಯೋಗ ದಿನವನ್ನು ಆಚರಿಸುತ್ತಿದೆ. ಅಲ್ಲದೆ ಇಂದು ಅತ್ಯಂತ ದೀರ್ಘವಾದ ಹಗಲು, ಉತ್ತರಾಯಣದ ಕೊನೆಯ ದಿನ ಎಂಬುದಾಗಿ ಈ ದಿನದ ವಿಶೇಷತೆಯನ್ನು ತಿಳಿಸಿದರು.

ಅಷ್ಟ ಅಂಗಗಳ ಮುಖಾಂತರ ಮನುಷ್ಯ ತನ್ನ ಆಧ್ಯಾತ್ಮಿಕ,ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಬಹುದು ಎಂದು ಯೋಗದ ಮಹತ್ವವನ್ನು ತಿಳಿಸಿದರು. ಒಳಾoಗಣ ಯೋಗಾಸನವನ್ನು ವಿವಿಧ ವಿಭಾಗಗಳನ್ನಾಗಿಸಿ ತರಬೇತಿಯನ್ನು ನೀಡಲಾಯಿತು.

ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಶಾಲಾ ಹೊರಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ವ್ಯಾಯಾಮವನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಯ ಸಂಭ್ರಮಕ್ಕೆ ಮೆರುಗು ಕೊಟ್ಟರು.

ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ಹಾಗೂ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ ರವರು ಯೋಗ ತರಬೇತುದಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾ ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ ಹಾಗು ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

- Advertisement -

Related news

error: Content is protected !!