ವಿಟ್ಲ:-SSLC 2020 ಪಬ್ಲಿಕ್ ಪರೀಕ್ಷೆಯಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 108 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಸತತವಾಗಿ 17 ವರ್ಷಗಳಿಂದ ಶೇ 100 ಫಲಿತಾಂಶ ದಾಖಲಿಸಿದಂತಾಗಿದೆ.
7ನೇ ಬಾರಿಗೆ ಶೇ 100 ಪ್ರಥಮ ದರ್ಜೆ ಫಲಿತಾಂಶ ದಾಖಲಿಸಿರುತ್ತದೆ. ಕುಮಾರಿ ಮೈತ್ರೆಯಿ. ಕೆ 619 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಕುಮಾರಿ ಅಭಿಜ್ಞಾ. ಯನ್ 617 ಅಂಕಗಳನ್ನು ಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಒಟ್ಟು 595 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವೈಷ್ಣವಿ. ಪೈ (619), ಶಿವಾನಿ.ಜಿ (614), ವೈಭವಿ. ಯನ್ (614), ಬಿ.ಯಸ್. ಅವನಿ (612), ತನ್ವಿ. ಆರ್. ಭಂಡಾರಿ (609), ದ್ರವ್ಯ. ಆರ್. ಶೆಟ್ಟಿ (608), ತೃಷಾ ರೈ (608), ಸ್ವಸ್ತಿಕ್ ಕೃಷ್ಣ. ಪಿ (607), ಎ. ಅನಂತ್ ಪೈ (606), ಫಾತಿಮತ್ ಇಶಾ (601) ನಪೀಶಾ ಶಾಬಾ.(598) ಸ್ಪೂರ್ತಿ ರೈ.(597) ಇವರು ಶಾಲೆಯ ಫಲಿತಾಂಶಕ್ಕೆ ಗರಿಮೆ ತಂದಿರುತ್ತಾರೆ. ಅಲ್ಲದೆ 26 ವಿದ್ಯಾರ್ಥಿಗಳು A+, 30 ವಿದ್ಯಾರ್ಥಿ ಗಳು A, 30ವಿದ್ಯಾರ್ಥಿಗಳು B+ಮತ್ತು 10ವಿದ್ಯಾರ್ಥಿಗಳು B ಗ್ರೇಡ್ ನೊಂದಿಗೆ ತೇರ್ಗಡೆ ಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ, ಮತ್ತು ಪ್ರೋತ್ಸಾಹಿಸಿದ ಪೋಷಕರಿಗೆ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಪಾಂಶುಪಾಲರು,ಅಧ್ಯಾಪಕ ವೃಂದವು ಅಭಿನಂದನೆಯನ್ನು ಸಲ್ಲಿಸುತ್ತದೆ.