Tuesday, May 7, 2024
spot_imgspot_img
spot_imgspot_img

ವಿಟ್ಲ: ಜೆಸಿಐ ವಿಟ್ಲ ಘಟಕದ ಜೆಸಿಐ ಸಪ್ತಾಹ-2023ರ “ಜೈತ್ರ”ದ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

- Advertisement -G L Acharya panikkar
- Advertisement -
vtv vitla

ವಿಟ್ಲ: ಸೆ. 09ರಿಂದ 15ರವರೆಗೆ ಜೆಸಿಐ ವಿಟ್ಲ ಘಟಕದ ವತಿಯಿಂದ ನಡೆಯುವ ಜೆಸಿಐ ಸಪ್ತಾಹ “ಜೈತ್ರ”ದ ಉದ್ಘಾಟನಾ ಕಾರ್ಯಕ್ರಮವನ್ನು ಜೇಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷ ಜೆಸಿ ಮೋನಪ್ಪ ಶೆಟ್ಟಿಯವರು ನೆರವೇರಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜೆಸಿಯ ಪೂರ್ವಾಧ್ಯಕ್ಷರು ಹಾಗೂ ಖ್ಯಾತ ವಕೀಲ ಜೇಸಿ ಜಯರಾಮ ರೈ ಯವರು ಜೆಸಿ ಸಂಸ್ಥೆಯ ಬಗ್ಗೆ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿಶ್ವೇಶ್ವರ ವಿ.ಕೆ.ರವರು ಆರೋಗ್ಯ ತಪಾಸಣೆಯ ಮಹತ್ವವನ್ನು ವಿವರಿಸಿದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೇದಾವತಿಯವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಜೆಸಿ ಪರಮೇಶ್ವರ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಿಕಟ ಪೂರ್ವಾಧ್ಯಕ್ಷ ಜೆಸಿ ಚಂದ್ರಹಾಸ ಕೊಪ್ಪಳ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಜೆಸಿ ದೀಕ್ಷಿತ್ ಜಿ ವಂದಿಸಿದರು. ಸಪ್ತಾಹದ ನಿರ್ದೇಶಕಜೆಸಿ ರಿತೇಶ್ ಶೆಟ್ಟಿ ಸಭೆಯಲ್ಲಿ ಕಾರ್ಯಕ್ರಮದ ಮುನ್ನೋಟವನ್ನು ಸಭೆಗೆ ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ವಿಟ್ಲ ಪರಿಸರದ ಜನತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು. ಸುಮಾರು 300 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.ಕಾರ್ಯಕ್ರಮದಲ್ಲಿ ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

- Advertisement -

Related news

error: Content is protected !!