Friday, May 17, 2024
spot_imgspot_img
spot_imgspot_img

ಸರಿಗಮಪ ರಿಯಾಲಿಟಿ ಶೋ ನಲ್ಲಿ ಮೋಡಿ ಮಾಡಿದ ಜ್ಞಾನ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲು!

- Advertisement -G L Acharya panikkar
- Advertisement -

ಕಡಬ: ಖಾಸಗಿ ಚಾನೆಲ್ ನಡೆಸುವ ಸರಿಗಮಪ ಕಾರ್ಯಕ್ರಮದಲ್ಲಿ ಸಂಗೀತ ಮೋಡಿ ಮಾಡಿದ ಜ್ಞಾನ ಎನ್ನುವ ಪುಟ್ಟ ಬಾಲೆಯ ಹೆಸರು ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲಾಗಿದೆ. ತನ್ನ ಎರಡುವರೆ ವರ್ಷದ ಪ್ರಾಯದಲ್ಲಿ ಸಂಗೀತ ಲೋಕದಲ್ಲಿ ಮಾಡಿದ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ.

ಮೂಲತಃ ಕಡಬ ತಾಲೂಕು ಕೊಂಬಾರು ಕಟ್ಟೆ ಇಡ್ಯಡ್ಕ ಎಂಬಲ್ಲಿನ ನಿವಾಸಿ ಪ್ರಸ್ತುತ ಬೆಂಗಳೂರು ರಾಮನಗರ ಎಂಬಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿರುವ ರೇಖಾ ಹಾಗೂ ಬೆಂಗಳೂರು ಕನಕಪುರ ನಿವಾಸಿ, ಹಿನ್ನೆಲೆ ಗಾಯಕ ಗುರುರಾಜ್ ದಂಪತಿ ಪುತ್ರಿ ಜ್ಞಾನ ಎಳವೆ ವಯಸ್ಸಿನಲ್ಲಿ ಸಂಗೀತ ಲೋಕದಲ್ಲಿ ಚಾಪು ಮೂಡಿಸಿದ ಪ್ರತಿಭೆ.

ಜ್ಞಾನ ಒಂದು ವರ್ಷದಲ್ಲಿ ಮಾತು ಆರಂಭಿಸಿದ್ದಾಳೆ. ತನ್ನ ತೊದಲು ಮಾತನಾಡುವ ಸಂದರ್ಭದಲ್ಲಿ ಜ್ಞಾನ ಶಕ್ತಿ ಹೆಚ್ಚಿತ್ತು. ಹಾಗಾಗಿ ತಾಯಿ ತರಗತಿಯಲ್ಲಿ ಶಿಷ್ಯಂದರಿಗೆ ಸಂಗೀತವನ್ನು ಹೇಳಿ ಕೊಡುವಾಗ ಈಕೆಯೂ ಮೆಲುಕು ಹಾಕುತ್ತಿದ್ದಲು. ಇದನ್ನರಿತ ಈಕೆಯ ತಾಯಿ ಈಕೆಯ ಪ್ರತಿಭೆಯನ್ನು ಗುರುತಿಸಿ ಹಾಡು ಹಾಡಿಸುತ್ತಿದ್ದಳು. ಎರಡುವರೆ ವರ್ಷದಲ್ಲಿ ಈಕೆ 10 ಕ್ಷಿಷ್ಟಕರವಾದ ಹಾಡು ಹಾಡಿದ್ದಾಳೆ. ಬಳಿಕದ ದಿನಗಳಲ್ಲಿ 45 ಹಾಡು ಹಾಡಿದ್ದಾಳೆ ತನ್ನ ಮೂರು ವಯಸ್ಸಿನಲ್ಲಿ ಈಕೆಯ ಹೆಸರು ಕರ್ನಾಟಕ ಬುಕ್ಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.

ಈಕೆಗೆ ಪ್ರಥಮವಾಗಿ ಮಜಾ ಟಾಕಿಸಿನಲ್ಲಿ ವೇದಿಕೆ ಸಿಕ್ಕಿತ್ತು. ಬಳಿಕ ಸರಿಗಪದಲ್ಲಿ ಹಾಡುಗಾರಿಕೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ತನ್ನ ಚಾಪು ಮೂಡಿಸಿದ್ದಾಳೆ. ತುಳುನಾಡಿನ ಕಾರುಣಿಕ ದೈವ ಕೊರಗಜ್ಜ ದೈವದ ಆಲ್ಬಮ್ ಸಾಂಗ್‌ಗೆ , ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹಾಡಿಗೆ ತನ್ನ ಮುದ್ದು ಕಂಠವನ್ನು ನೀಡಿದ್ದಾಳೆ. ಕಿರುತೆರೆ, ಚಲನಚಿತ್ರಗಳಲ್ಲಿ ಹಲವು ಅವಕಾಶಗಳು ಈಕೆಯನ್ನು ಕೈ ಬೀಸಿ ಕರೆದಿದೆ. ರಾಮನಗ ನಗರ ಸಭೆಯ ಸ್ವಚ್ಚ ಸರ್ವೇಕ್ಷಣಾ ಸಮಿತಿಯ ರಾಯಭಾರಿಯಾಗಿದ್ದಾಳೆ.

driving
- Advertisement -

Related news

error: Content is protected !!