Wednesday, June 17, 2026
spot_imgspot_img
spot_imgspot_img

ಮಂಗಳೂರು: ಅಕ್ರಮ ಡ್ರಗ್ಸ್ ಮಾರಾಟ ದಂಧೆ; ನಾಲ್ವರ ಸೆರೆ

- Advertisement -
- Advertisement -

ಮಂಗಳೂರು: ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್ ಡಿಎಮ್ ಎ ಮತ್ತು ಗಾಂಜಾವನ್ನು ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಸೈ ಶರಣಪ್ಪ ತಂಡವು ಭಾನುವಾರ ರಾತ್ರಿ ಬೊಳಿಯಾರ್ ನಲ್ಲಿ ದಾಳಿ ನಡೆಸಿ ನಿಷೇದಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಅಲ್ಟೊ ಕಾರು ಸಮೇತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43 ) ಅಡ್ಯಾರ್ ಕಟ್ಟೆ, ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್, ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು.

ಬಂಧಿತರಿಂದ 2,10,000 ಮೌಲ್ಯದ ನಿಷೇದಿತ 4 ಕೆ.ಜಿ ಗಾಂಜಾ, 40ಗ್ರಾಂ.ಎಮ್ ಡಿಎಮ್ ಎ ಮತ್ತು 2 ಲಕ್ಷ ಮೌಲ್ಯದ ಆಲ್ಟೊ ಕಾರನ್ನು ವಶ ಪಡಿಸಲಾಗಿದೆ.

ಕೊಣಾಜೆ ಠಾಣಾ ಪಿ.ಎಸ್ಸೈ ಶರಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಪುರುಷೋತ್ತಮ್, ಶೈಲೇಂದ್ರ, ದೀಪಕ್, ಸುರೇಶ್, ಹೇಮಂತ್, ಗೌಸ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!