Saturday, April 27, 2024
spot_imgspot_img
spot_imgspot_img

ಭಾರತೀಯರಿಗೆ ನವರಾತ್ರಿ ಶುಭಾಶಯ ಕೋರಿದ ಜೋ ಬೈಡನ್

- Advertisement -G L Acharya panikkar
- Advertisement -

ವಾಷಿಂಗ್ಟನ್​ : ದೇಶದಲ್ಲಿ ನವರಾತ್ರಿ ಆಚರಣೆ ಆರಂಭಗೊಂಡಿದೆ. ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ನವರಾತ್ರಿ ಉತ್ಸವಕ್ಕೆ ಈ ಭಾರೀ ಕೊರೊನಾ ಬ್ರೇಕ್​ ಹಾಕಿದೆಯಾದರೂ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಹಬ್ಬದ ಸಂಭ್ರಮಾಚರಣೆ ಶುರುವಾಗುತ್ತಲೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬೈಡನ್​ ಅನಿವಾಸಿ ಭಾರತೀಯರು ಹಾಗೂ ವಿಶ್ವದ ಹಲವೆಡೆಗಳಲ್ಲಿರುವ ಭಾರತೀಯರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಟ್ವಿಟರ್​​ ಮೂಲಕ ನಿನ್ನೆ ನವರಾತ್ರಿಗೆ ಶುಭಕೋರಿರುವ ಜೋ ಬೈಡನ್,​ ಇಂದಿನಿಂದ ಹಿಂದೂಗಳ ಹಬ್ಬವಾದ ನವರಾತ್ರಿ ಆರಂಭವಾಗುತ್ತಿದೆ. ಅಮೆರಿಕಾ ಹಾಗೂ ಪ್ರಪಂಚದಾದ್ಯಂತ ನವರಾತ್ರಿ ಆಚರಿಸುತ್ತಿರುವ ಎಲ್ಲರಿಗೂ ನನ್ನ ಹಾಗೂ ನನ್ನ ಪತ್ನಿ ಜಿಲ್​ ಬೈಡನ್​ ಕಡೆಯಿಂದ ಶುಭಾಶಯಗಳು​. ಈ ಆಚರಣೆಯ ಮೂಲಕ ಮತ್ತೊಮ್ಮೆ ದುಷ್ಟ ಶಕ್ತಿಗಳ ಅಂತ್ಯವಾಗಿ ಒಳಿತು ಮರುಕಳಿಸಲಿ. ನವರಾತ್ರಿಯ ಜೊತೆಗೆ ಎಲ್ಲರೂ ಹೊಸ ಶುರುವಿಗೆ ಸಾಕ್ಷಿಯಾಗೋಣ ಮತ್ತು ಎಲ್ಲರಿಗೂ ಹೊಸ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದ್ದಾರೆ.

- Advertisement -

Related news

error: Content is protected !!