Tuesday, May 7, 2024
spot_imgspot_img
spot_imgspot_img

ಜೋಯ್‌ ಅಲುಕ್ಕಾಸ್‌ನಲ್ಲಿ ಡೈಮಂಡ್ ಉಂಗುರ ಕದ್ದ ಕಳ್ಳ;

- Advertisement -G L Acharya panikkar
- Advertisement -

ಜೋಯ್ ಅಲುಕ್ಕಾಸ್ ಆಭರಣ ಮಳಿಗೆಗೆ ಬಂದ ವ್ಯಕ್ತಿಯೊಬ್ಬ ಗ್ರಾಹಕರ ಸೋಗಿನಲ್ಲಿ ದುಬಾರಿ ಡೈಮಂಡ್ ಉಂಗುರ ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 18ರಂದು ಬೆಂಗಳೂರು ನಗರದ ಎಂ.ಜಿ ರಸ್ತೆಯ ಜೋಯ್‌ ಅಲುಕ್ಕಾಸ್‌ನಲ್ಲಿ ಈ ಘಟನೆ ನಡೆದಿದೆ.

ಗ್ರಾಹಕನ ಸೋಗಿನಲ್ಲಿ ಮಳಿಗೆಗೆ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. 75 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಡೈಮಂಡ್ ಉಂಗುರವನ್ನು ಬಹಳ ನಾಜೂಕಾಗಿ ಎಗರಿಸಿದ್ದಾನೆ. ಡೈಮಂಡ್ ಉಂಗುರ ಕದ್ದ ಖತರ್ನಾಕ್ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಖತರ್ನಾಕ್ ಕಳ್ಳ ಡೂಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಡೈಮಂಡ್ ಉಂಗುರ ಕದ್ದಿದ್ದಾನಂತೆ. ಸಿಸಿಟಿವಿಯಲ್ಲಿ ಕಳ್ಳನ ಕೈಚಳಕವನ್ನ ನೋಡಿ ಜೋಯ್ ಅಲುಕ್ಕಾಸ್ ಸಿಬ್ಬಂದಿ ಗಾಬರಿಯಾಗಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಖತರ್ನಾಕ್ ಕಳ್ಳ ಬೆಂಗಳೂರಿನ ಹಲವು ಆಭರಣ ಅಂಗಡಿಗಳಲ್ಲಿ ಇದೇ ರೀತಿಯಲ್ಲಿ ಕಳ್ಳತನ ಮಾಡಿರೋ ಶಂಕೆ ವ್ಯಕ್ತವಾಗಿದೆ. ಡೈಮಂಡ್ ಕಳ್ಳನಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!