


ಶ್ರೀ ದುರ್ಗಾ ಮಿತ್ರವೃಂದ (ರಿ) ಮೈರಾ- ಕೇಪು ಆಶ್ರಯದಲ್ಲಿ ದಿ| ಅಶೋಕ್ ಎ ಇರಾಮೂಲೆ ಮತ್ತು ದಿ| ಹರೀಶ್ ಆಚಾರ್ಯ ಮೈರಾ ಸ್ಮರಣಾರ್ಥ ಆಯ್ದ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ನವೆಂಬರ್ 9ನೇ ಶನಿವಾರ ಸಂಜೆ ಶ್ರೀ ದುರ್ಗಾ ರಂಗ ಮಂದಿರ ವಠಾರ ಮೈರದಲ್ಲಿ ನಡೆಯಿತು.


ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವನ್ನು ಪುರುಷೋತ್ತಮ ಪುತ್ತೂರು ಉದ್ಘಾಟಿಸಿದರು.ದುರ್ಗಾ ಮಿತ್ರವೃಂದ ಅಧ್ಯಕ್ಷರು ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ , ಜಗಜೀವನ್ ಶೆಟ್ಟಿ , ಸುಧಾಕರ ಪೂಜಾರಿ ಬಡೆಕೋಡಿ , ಶೀನ ನಾಯಕ್ ಕಲ್ಲಪಾಪು , ಮಿತ್ರವೃಂದ ಪದಾಧಿಕಾರಿಗಳು , ಸದಸ್ಯರು , ಉಪಸ್ಥಿತರಿದ್ದರು.


ಬಲಿಷ್ಠ 6 ತಂಡಗಳ ನಡುವೆ ನಡೆದ , ಆಯ್ದ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕೃಷ್ಣ ಶೆಟ್ಟಿ ಬೇಗ್ರೋಡಿ ಮಾಲೀಕತ್ವದ ತುಳುನಾಡ ಫೈಟರ್ಸ್ ತಂಡ ಪ್ರಥಮ ಸ್ಥಾನದೊಂದಿಗೆ ಪ್ರಥಮ ಸ್ಥಾನ ಪಡೆದು ವಿನ್ನರ್ಸ್ ಆಗಿ ಮಿಂಚಿದ್ದಾರೆ. ರಶೀದ್ ಸೌದಿ ಅರೇಬಿಯಾ ಹಾಗೂ ಸಂತೋಷ್ ಕರವೀರ ಮಾಲೀಕತ್ವದ SDMV ಪವರ್ ಸ್ಟ್ರೈಕರ್ಸ್ ದ್ವಿತೀಯ ಸ್ಥಾನ ಪಡೆದು ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ.


ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಅಲ್ ರೌಂಡರ್ ಹಾಗಿ ಮೋಹನ್ ಬೈರಿಕಟ್ಟೆ , ಉತ್ತಮ ಹೊಡೆತಗಾರನಾಗಿ ಆಶಿಬ್ ಕುಕ್ಕೆಬೆಟ್ಟು , ಲಿಪ್ಟರ್ ಹಾಗಿ ಶೈಲೇಶ್ ಬೈರಿಕಟ್ಟೆ , ಪಂದ್ಯಾಟದ ಡಿಪೆಂಡರ್ ಆಗಿ ವರುಣ್ ಮೈರ ,ಟ್ರೋಫಿಗಳನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಾಲಿಬಾಲ್ ಆಟಗಾರರಾದ ಅಶ್ರಫ್ ಒಕ್ಕೆತ್ತೂರು ಹಾಗೂ ನಿರಂಜನ್ ಕಲ್ಲಪಾಪು ಇವರನ್ನು ಸನ್ಮಾನಿಸಲಾಯಿತು..









