Wednesday, May 8, 2024
spot_imgspot_img
spot_imgspot_img

ಪುತ್ತೂರು: ನಾಳೆ (ಆ.17ಕ್ಕೆ) ಹಿಂ.ಜಾ.ವೇಯಿಂದ ಪುತ್ತೂರಿನಲ್ಲಿ ”ಕಬಕ ಚಲೋ”; ಜನ ಜಾಗೃತಿಗಾಗಿ ಸಾವರ್ಕರ್ ರಥ ಯಾತ್ರೆ

- Advertisement -G L Acharya panikkar
- Advertisement -

ಪುತ್ತೂರು: “ಭಾರತದ ಸ್ವಾತಂತ್ರ‍್ಯ ಸೇನಾನಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ, ಉತ್ಸಾಹ ಭರಿತ ದಾರ್ಶನಿಕ ಮತ್ತು ಸಕ್ರಿಯ ಸುಧಾರಣಾವಾದಿ ಎಂದು ಹೆಸರು ಗಳಿಸಿರುವ ಸಾವರ್ಕರ್ ಅವರಿಗೆ ಕಬಕದಲ್ಲಿ ಅಪಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮ ಬೆಳಸುವ ನಿಟ್ಟಿನಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಆ.17ರಂದು ಪುತ್ತೂರಿನಲ್ಲಿ ಜನ ಜಾಗೃತಿ ರಥ ಯಾತ್ರೆ ನಡೆಯಲಿದೆ” ಎಂದು ಹಿಂದು ಜಾಗರಣ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಘೋಷಣೆ ಮಾಡಿದ್ದಾರೆ.

ಆ.15ರಂದು ಕಬಕದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ, ದಿನಾಚರಣೆಯಲ್ಲಿ ಘೋಷಣೆ ಮಾಡಲಾಗಿದೆ. ಆ.17ರಂದು ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕದ ತನಕ ವೀರ ಸಾವರ್ಕರ್ ರಥಯಾತ್ರೆ ನಡೆಸುವ ಕುರಿತು ಸಂಕಲ್ಪ ಕೈಗೊಳ್ಳಲಾಯಿತು

ಈ ವೇಳೆ ಹಿಂದು ಜಾಗರಣ ವೇದಿಕೆ ವಿಭಾಗ ಮಾತ್ರ ಸುರಕ್ಷಾ ಪುಮುಖ್ ಗಣರಾಜ್ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಜಿಲ್ಲಾ ಮಾತೃಸುರಕ್ಷಾ ಪುಮುಖ್ ರಾಜೇಶ್ ಪಂಚೋಡಿ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ನಗರ ಅಧ್ಯಕ್ಷ ಪುಷ್ಪರಾಜ್, ಅವಿನಾಶ್, ದಿನೇಶ್ ಪಂಜಿಗ, ಗ್ರಾ.ಪಂ ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಪವಿತ್ರ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!