Friday, June 5, 2026
spot_imgspot_img
spot_imgspot_img

ಕಬಕ: ಮನೆಯಿಂದ ಹೊರ ಹೋದ ವ್ಯಕ್ತಿ ವಾಪಸು ಬಾರದೇ ನಾಪತ್ತೆ; ಪತ್ತೆಗಾಗಿ ಮನವಿ

- Advertisement -
- Advertisement -

ಕಬಕ: ಮನೆಯಿಂದ ಹೊರ ಹೋದ ವ್ಯಕ್ತಿ ವಾಪಸು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಈಶ್ವರ ನಲಿಕೆ (42) ಎಂದು ಗುರುತಿಸಲಾಗಿದೆ.

ಈಶ್ವರ ನಲಿಕೆ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 2 ವರ್ಷಗಳಿಂದ ಅವರಿಗೆ ಕಿವಿ ಸರಿಯಾಗಿ ಕೇಳಿಸದೇ ಇದ್ದು ಸ್ವಲ್ಪ ಮಾನಸಿಕ ಅಸ್ವಸ್ಮರಂತೆ ಇದ್ದರು. ದಿನಾಂಕ:16-09-2025 ರಂದು ಮದ್ಯಾಹ್ನ 3.45 ಗಂಟೆಗೆ ಮನೆಯಿಂದ ಹೋಗಿದ್ದು ಅದೇ ದಿನ ರಾತ್ರಿ 7.30 ಗಂಟೆಗೆ ಕಬಕ ಪೇಟೆಯಲ್ಲಿ ಇದ್ದರು. ನಂತರ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಈಶ್ವರ ಎಂಬವರ ಪತ್ನಿ ಎಲ್ಲಾ ಕಡೆಗಳಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಈಶ್ವರ ನಲಿಕೆರವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ವಿಟ್ಲ ಪಿಎಸ್‌ಗೆ ದೂರವಾಣಿ ಸಂಖೆ: ps- 08255239233 ಅಥವಾ ಪೊಲೀಸ್‌ ನಿಯಂತ್ರಣ ಕೋಣೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಈಶ್ವರ ನಲಿಕೆರವರು 135.00 ಎತ್ತರವಿದ್ದು, ಕೂದಲು ಕಪ್ಪು, ಕಂದು ಬಣ್ಣದ ಶರ್ಟ್, ಬಿಳಿ ಬಣ್ಣದ ಪಂಚೆ ಉಡುಪು ಧರಿಸಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.

- Advertisement -

Related news

error: Content is protected !!