Monday, May 6, 2024
spot_imgspot_img
spot_imgspot_img

ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಪತನ; ಐವರು ಮೃತ್ಯು

- Advertisement -G L Acharya panikkar
- Advertisement -

ಆರು ಜನರೊಂದಿಗೆ  ನಾಪತ್ತೆಯಾಗಿದ್ದ ಮನಂಗ್ ಎ‌ ಹೆಲಿಕಾಪ್ಟರ್ ನೇಪಾಳದ ಮೌಂಟ್ ಎವರೆಸ್ಟ್ ಬಳಿ   ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡು ಪೈಲಟ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಬೆಟ್ಟದ ಮೇಲಿರುವ ಮರಕ್ಕೆ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದ್ದು,  ಐದು ಮೃತದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ.

ಮೃತಪಟ್ಟ ದೇಹಗಳ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಓರ್ವ ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ನಡೆಯುತ್ತಿದೆ.
ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ಕಠ್ಮಂಡುವಿನಿಂದ ರಕ್ಷಣೆಗಾಗಿ ಹೊರಟಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವಿಟ್ ಮಾಡಿದೆ.

- Advertisement -

Related news

error: Content is protected !!