- Advertisement -
- Advertisement -






ಕಾರ್ಕಳ: ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿ, ಕಬ್ಬಡಿ ಆಟಗಾರನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಕಾರ್ಕಳ ಮುನಿಯಲು ನಿವಾಸಿ ಪ್ರೀತಮ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ತಂಡದ ಸಕ್ರಿಯ ಆಹ್ವಾನಿತ ಆಟಗಾರ. ಎಸ್. ಡಿ. ಎಮ್ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರತಿಭಾನ್ವಿತ ಆಟಗಾರ ಕಬಡ್ಡಿ ಆಟದ ನಿಮಿತ್ತ ಮಂಡ್ಯಕ್ಕೆ ತೆರಳಿದ್ದ ಪ್ರೀತಮ್ ಶೆಟ್ಟಿ ಅವರಿಗೆ ಆಟದ ನಡುವೆ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
- Advertisement -








