Thursday, April 25, 2024
spot_imgspot_img
spot_imgspot_img

ಕಾಬೂಲ್ ನಗರದ ಮೇಲೆ ರಾಕೆಟ್ ದಾಳಿ

- Advertisement -G L Acharya panikkar
- Advertisement -

ಕಾಬೂಲ್: ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. 10 ರಾಕೇಟ್ ಗಳು ಕಾಬೂಲ್ ನಗರದ ಮೇಲೆ ಅಪ್ಪಳಿಸಿವೆ. ತಾಲಿಬಾನ್ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಅಪ್ಘಾನಿಸ್ತಾನದಿಂದ ಸೇನಾ ಪಡೆ ಹಿಂತೆಗೆಯಲು ಅಮೆರಿಕ ಸಿದ್ದತೆ ನಡೆಸಿರುವಂತೆಯೇ ಈ ವೈಮಾನಿಕ ದಾಳಿ ನಡೆದಿದೆ. ಅಪ್ಘಾನಿಸ್ತಾನ ಮತ್ತು ಇರಾಕ್ ನಿಂದ ಶೀಘ್ರವೇ 2500 ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ರಾಕೆಟ್ ದಾಳಿಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಅಪ್ಘಾನಿಸ್ತಾನದಲ್ಲಿ ಶಾಂತಿ ನೆಲೆಸವುದನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!