Friday, June 27, 2025
spot_imgspot_img
spot_imgspot_img

ಕಡಬ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಮೇಲ್ಛಾವಣಿ ಸಂಪೂರ್ಣ ಜಖಂ; ದಂಪತಿಗಳು ಅಪಾಯದಿಂದ ಪಾರು..!

- Advertisement -
- Advertisement -

ಕಡಬ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು, ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ.

ಬಾಬು ಮತ್ತು ಲಕ್ಷ್ಮೀ ದಂಪತಿಗಳ ಮನೆ ಮೇಲೆ ಮರ ಬಿದ್ದಿದ್ದು, ದಂಪತಿಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಶೌಚಾಲಯ, ನೀರಿನ ಟ್ಯಾಂಕ್ ಗೆ ಸಂಪೂರ್ಣ ಹಾನಿಯಾಗಿದೆ.

ದಂಪತಿಗಳ ಪಕ್ಕದಲ್ಲಿರುವ ಒಂದೆರೆಡು ಮನೆಗಳಿಗೂ ಹಾನಿ ಉಂಟಾಗಿದ್ದು, ಘಟನೆಯ ಬಳಿಕ ಕಡಬ ತಾಲೂಕಿನಾದ್ಯಂತಾ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇನ್ನು ಸ್ಥಳಕ್ಕೆ ಕಡಬ ತಹಶಿಲ್ದಾರ್ ಪ್ರಭಾಕರ್ ಖಜೂರೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!