Monday, June 8, 2026
spot_imgspot_img
spot_imgspot_img

ಕಡಬ: ಬಲ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಥಿತಿ ಶಿಕ್ಷಕಿ ನಾಪತ್ತೆ*

- Advertisement -
- Advertisement -

ಕಡಬ: ಯುವತಿಯೋರ್ವರು ನಾಪತ್ತೆಯಾದ ಘಟನೆ ಕಡಬ ತಾಲೂಕಿನ ಕುಂತೂರು ಸಮೀಪದ ಅರ್ಬಿ ಎಂಬಲ್ಲಿ ನಡೆದಿದೆ.

ನಾಪತ್ತೆಯಾದಾಕೆಯನ್ನು ಮಮತ (24) ಎಂದು ಗುರುತಿಸಲಾಗಿದೆ. ಈಕೆ ಸುಮಾರು ಐದು ವರುಷಗಳಿಂದ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆ ಆಗಸ್ಟ್ 31 ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ಆದರೆ ಸಂಜೆಯಾದರೂ ಶಾಲೆಯಿಂದ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುತ್ತಾರೆ.

ಮನೆಯವರು ಈಕೆಯನ್ನು ಫೋನ್ ಮೂಲಕ ಸಂಪರ್ಕಿಸಿದಾಗ, ನಾನು ಇಬ್ಬರು ಸ್ನೇಹಿತರ ಜೊತೆ ಕೆಲಸಕ್ಕೆ ಸೇರುವುದಕ್ಕೋಸ್ಕರ ಮೈಸೂರಿಗೆ ಹೋಗಿರುತ್ತೇನೆ ಎಂದು ಸಂದೇಶವನ್ನು ಕಳುಹಿಸಿರುತ್ತಾಳೆ. ಬಳಿಕ ಆಕೆಯಿಂದ ಯಾವುದೇ ಸಂದೇಶವಾಗಲಿ, ಫೋನ್ ಕರೆಗಳಾಗಲಿ ಬಾರದೆ ಫೋನ್ ಸ್ವೀಚ್ ಆಫ್ ಆಗಿದೆ. ಈ ಕುರಿತಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!