Friday, June 26, 2026
spot_imgspot_img
spot_imgspot_img

ಕಡಬ: ಸಹೋದರರ ನಡುವೆ ಜಗಳ; ಅಣ್ಣನಿಗೆ ಚೂರಿ ಇರಿದ ತಮ್ಮ

- Advertisement -
- Advertisement -

ಕಡಬ: ಕಡಬದ ಐತ್ತೂರು ಗ್ರಾಮದ ಮುಜೂರುನಲ್ಲಿ ಸಹೋದರರ ನಡುವೆ ಜಗಳ ನಡೆದು ಸಹೋದರನಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿತ ಆರೋಪಿ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving

ಮೇ.14ರಂದು ರಾತ್ರಿ ಐತ್ತೂರು ಗ್ರಾಮದ ಮುಂಡಡ್ಕ ನಿವಾಸಿ ಬಾಳಪ್ಪ ಗೌಡ ಎಂಬವರ ಎರಡನೆಯ ಪತ್ನಿಯ ಪುತ್ರ ಪ್ರೀತಮ್ ಎಂಬವರು ಬಾಳಪ್ಪ ಗೌಡರ ಮೊದಲನೆ ಪತ್ನಿಯ ಪುತ್ರ ಧ್ರುವಕುಮಾರ್ ಎಂಬವರಿಗೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ,ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು.

ಗಾಯಗೊಂಡಿದ್ದ ಧ್ರುವಕುಮಾರ್ ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಮಧ್ಯೆ ಆರೋಪಿ ಪ್ರೀತಮ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!