Sunday, July 6, 2025
spot_imgspot_img
spot_imgspot_img

ಕಡಬ: ಕೋಳಿ ಫಾರ್ಮ್ ನಲ್ಲಿ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸರಿಂದ ದಾಳಿ; ಐವರ ಬಂಧನ, ನಗದು ವಶಕ್ಕೆ

- Advertisement -
- Advertisement -

ಕಡಬ: ಕೋಳಿ ಫಾರ್ಮ್ವೊಂದರಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡ ಘಟನೆ ಕೊಯಿಲ ಗ್ರಾಮದ ಅಂಬ ಎಂಬಲ್ಲಿ ನಡೆದಿದೆ. ಪ್ರಮೋದ್ ಹಿರೆಬಂಡಾಡಿ, ದರ್ಶನ್ ಅಂಬ, ಸತೀಶ್ ಪಟ್ಟೆ, ಸುನಿಲ್ ಉದನೆ, ಅರುಣ್ ಪ್ರಸಾದ್ ನೇರಳಕಟ್ಟೆ ಬಂಧಿತರು.

ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಠಾಣೆ ಯ ಎಸ್.ಐ.ರುಕ್ಮ ನಾಯ್ಕ್ ಹಾಗು ಹೆಚ್.ಸಿ. ಹರೀಶ್ ಪಿ.ಸಿ.ಶ್ರೀಶೈಲ, ಭವಿತ್ ಎಎಸ್ಐ ಚಂದ್ರಶೇಖರ್ , ಹೊಯ್ಸಲದ ಶಿವರಾಜ್ ಮತ್ತು ಕುಮಾರ್, ಹೋಂ ಗಾರ್ಡ್ ರತೀಶ್ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಐವರು ಪೊಲೀಸ್ ವಶವಾಗಿದ್ದಾರೆ. ಹರೀಶ್ ಓಕೆ, ಶಿಯಾಬ್ ಗೊಳಿತ್ತಡಿ, ಸಂಜೀವ ಪೂಜಾರಿ ಅಂಬ ಸೇರಿದಂತೆ ಹಲವರು ಪರಾರಿಯಾಗಿದ್ದಾರೆ. ದಾಳಿಯ ವೇಳೆ ಆಟಕ್ಕೆ ಬಳಸಿದ ರೂ. 8940 ನಗದು ಹಾಗೂ ಇಸ್ಪೀಟೆಲೆಗಳು ಅಲ್ಲದೆ ಸ್ಥಳದಲ್ಲಿದ್ದ ಎರಡು ಆಟೋರಿಕ್ಷಾ ಮತ್ತು ಮೋಟರ್ ಸೈಕಲ್ ನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!