Saturday, June 6, 2026
spot_imgspot_img
spot_imgspot_img

ಕಡಬ: ಅವ್ಯಾಚವಾಗಿ ಬೈದು ಮಹಿಳೆಯ ಮೇಲೆ ಹಲ್ಲೆ; ಪ್ರಕರಣ‌ ದಾಖಲು..!

- Advertisement -
- Advertisement -

ಕಡಬ: ಮಹಿಳೆಯೋರ್ವರು ಮನೆಯಲ್ಲಿ ಒಬ್ಬರೆ ಇದ್ದ ಸಮಯ, ವ್ಯಕ್ತಿಯೊಬ್ಬರು ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವ ಘಟನೆ ಕೊಂಬಾರು ಗ್ರಾಮ, ಕಡಬ ತಾಲೂಕಿನಲ್ಲಿ ನಡೆದಿದೆ.

ಆರೋಪಿಯನ್ನು ಶಶಿಧರ ಎಂದು ಗುರುತಿಸಲಾಗಿದೆ.

ಗಂಗಮ್ಮ (72) ಕೊಂಬಾರು ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರಿನಂತೆ, ಮನೆಯಲ್ಲಿ ಒಬ್ಬರೆ ಇದ್ದ ಸಮಯದಲ್ಲಿ ನೆರೆಕೆರೆಯ ಸಂಬಂಧಿ ಶಶಿಧರ ಎಂಬಾತನು ಮಹಿಳೆಯ ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವುದನ್ನು ನೋಡಿ ಗಂಗಮ್ಮ ಅಕ್ಷೇಪಿಸಿರುತ್ತಾರೆ. ಈ ವೇಳೆ ಆರೋಪಿ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಂಗಮ್ಮ ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:34/2024 ಕಲಂ:447.427.323.504 ಐ.ಪಿ.ಸಿ ರಂತೆ‌ ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!