Sunday, June 21, 2026
spot_imgspot_img
spot_imgspot_img

ಕಡಬ : ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮನೆಗೆ ಹಿಂತಿರುಗದೆ ನಾಪತ್ತೆ.!

- Advertisement -
- Advertisement -

ಕಡಬ:- ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಬಲ್ಯದಿಂದ ವರದಿಯಾಗಿದೆ.

ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿರುವ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ದೇರಾಜೆ ನಿವಾಸಿ ಚಂದ್ರಶೇಖರ್(23) ಎಂಬಾತ ಸೆಪ್ಟೆಂಬರ್ 04 ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿದೆ. ಮೊಬೈಲನ್ನು ಮನೆಯಲ್ಲೇ ಬಿಟ್ಟು ಬೈಕಿನಲ್ಲಿ ತೆರಳಿದ್ದು, ನನ್ನನ್ನು ಹುಡುಕಬೇಡಿ ಹುಡುಕಿದರೆ ಜೀವಂತವಾಗಿ ಇರುವುದಿಲ್ಲ ಎಂದು ಮೊಬೈಲ್‌ ಕೆಳಗಡೆ ಚೀಟಿ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ಆತನ ತಂದೆ ಧರ್ಣಪ್ಪ ಪೂಜಾರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!