Saturday, April 20, 2024
spot_imgspot_img
spot_imgspot_img

ಕಡಬ: ಕಾರಿನೊಳಗೆ ಕೂಡಿ ಹಾಕಿ ಪಿಡಿಓ ಗೆ ಹಲ್ಲೆ – ಬಾಲಕಿಯ ಫೋಟೋ ಪ್ರಕರಣದ ಯಾಕೂಬ್ ಸಹಿತ 5 ಮಂದಿಯ ಮೇಲೆ ಪ್ರಕರಣ ದಾಖಲು!

- Advertisement -G L Acharya panikkar
- Advertisement -

ಕಡಬ: ಕಡಬ ತಾಲೂಕಿನ ಬಲ್ಯ ಸಂಪನಡ್ಕದಲ್ಲಿ ಕರ್ತವ್ಯ ನಿರತ ಪಿಡಿಓ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ರಸ್ತೆ ನಿರ್ಮಾಣ ಕಾಮಗಾರಿಯ ಸ್ಥಳ ಪರಿಶೀಲನೆಗೆ ಕುಟ್ರುಪಾಡಿ ಪಂಚಾಯತ್ PDO ವಿಲ್ಫ್ರೆಡ್ ರೋಡ್ರಿಗಸ್ ತೆರಳಿದ್ದಾಗ ಅವರ ಕಾರಿಗೆ ದಿಗ್ಬಂಧನ ವಿಧಿಸಿ ಹಲ್ಲೆಗೈದಿದ್ದಾರೆ. ಜೊತೆಗೆ ಅವರ ಜೊತೆಗಿದ್ದ ಇತರರಿಗೂ ನಿಂದಿಸಿ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಐವರ ವಿರುದ್ಧ ಪ್ರಕರಣ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಯಾಕೂಬ್, ಅಬ್ದುಲ್ ಕರೀಂ, ಹನೀಫ್, ರಹಿಮತ್, ಇಕ್ಬಾಲ್ ಮೇಲೆ ಕೇಸು ದಾಖಲಾಗಿದ್ದು ಯಾಕೂಬ್ ಮೇಲೆ ನಿನ್ನೆ ಒಂದೇ ದಿನ ಎರಡು ಪ್ರಕರಣಗಳು ದಾಖಲಾಗಿವೆ.

ಅಪ್ರಾಪ್ತ ಬಾಲಕಿ ಫೋಟೋ ತೆಗೆದ ವಿಚಾರದಲ್ಲಿ ಭಾಗಿಯಾದ ಯಾಕೂಬ್ ಈ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!