Tuesday, April 20, 2021
spot_imgspot_img
spot_imgspot_img

ಕಡಬ: ಮನೆಯರಿಂದ ಪ್ರೀತಿಗೆ ನಿರಾಕರಣೆ – ನೇಣು ಬಿಗಿದು ಯುವತಿ ಆತ್ಮಹತ್ಯೆ !

ಕಡಬ: ನೆರೆ ಮನೆಯಾತನ ಪ್ರೀತಿಯಲ್ಲಿ ಸಿಲುಕಿದ್ದ ಯುವತಿಯೊಬ್ಬಳು ಮದುವೆಗೆ ಮನೆಯವರು ನಿರಾಕರಿಸಿದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬ ತಾಲೂಕಿನ ಬಲ್ಯದಲ್ಲಿ ನಡೆದಿದೆ.

ಬಲ್ಯ ಗ್ರಾಮದ ಪುತ್ತಿಲ ಬರೆತ್ತಡಿ ನಿವಾಸಿ ಕೊರಗಪ್ಪ ಗೌಡ ಎಂಬವರ ಪುತ್ರಿ ರಮ್ಯ(23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಹಾಗೂ ನೆರೆ ಮನೆಯ ಮಹೇಶ್ ಪರಸ್ಪರ ಪ್ರೀತಿಸುತಿದ್ದರು ಎನ್ನಲಾಗುತ್ತಿದೆ . ಆದರೆ ಇವರಿಬ್ಬರ ಮದುವೆಗೆ ರಮ್ಯ ಮನೆಯವರ ವಿರೋಧವಿತ್ತು.ಇದರಿಂದ ಮನನೊಂದ ಯುವತಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮ‌ಹತ್ಯೆಗೆ ಶರಣಾಗಿದ್ದಾಳೆ.

ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಯುವತಿಯ ತಾಯಿ ಮನೆಗೆ ವಾಪಸ್ಸು ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ರುಕ್ಮ‌ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!