Saturday, June 13, 2026
spot_imgspot_img
spot_imgspot_img

ಕಡಂಬು: ವಿಟಿವಿ ವರದಿ ಫಲಶ್ರುತಿ- ಅಪಾಯಕಾರಿ ರಸ್ತೆ ತಿರುವಿನಲ್ಲಿ ಗುಂಡಿ

- Advertisement -
- Advertisement -

ತಕ್ಷಣ ಸೂಕ್ತ ಕ್ರಮ ಕೈಗೊಂಡ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್

ಕಡಂಬು: ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂಬು ಸೇತುವೆ ಬಳಿ ಅಪಾಯಕಾರಿ ರಸ್ತೆ ತಿರುವಿನಲ್ಲಿ ನಳ್ಳಿನೀರು ಪೈಪ್ ದುರಸ್ಥಿ ಕಾಮಗಾರಿಗಾಗಿ ತೋಡಿದ ಬೃಹತ್‌ ಗುಂಡಿಯೊಂದು ವಾಹನ ಚಾಲಕರ ಮತ್ತು ಪಾದಾಚಾರಿಗಳ ಪ್ರಾಣಕ್ಕೆ ಮೃತ್ಯುಕೂಪದಂತೆ ಕಾಡುತ್ತಿರುವ ಬಗ್ಗೆ ವಿಟಿವಿ ಮಾಧ್ಯಮದಲ್ಲಿ ವರದಿ ಭಿತ್ತರಿಸಲಾಗಿತ್ತು.

ವಾಹನ ಸವಾರರ ಪ್ರಾಣಬಲಿಗಾಗಿ ಕಾಯುತ್ತಿರುವ ಈ ಮೃತ್ಯುಕೂಪವನ್ನು ತಕ್ಷಣವೇ ಮುಚ್ಚದಿದ್ದಲ್ಲಿ ಯಾವುದೇ ಕ್ಷಣ ಅಪಾಯ ಕಟ್ಟಿಟ್ಟಬುತ್ತಿಯಾಗಲಿದೆ ಗ್ರಾಮ ಪಂಚಾಯತ್‌ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ಪ್ರಕಟ ಮಾಡಲಾಗಿತ್ತು.

ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ತಕ್ಷಣವೇ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಗುಂಡಿಯನ್ನು ಮುಚ್ಚಿ ವಾಹನ ಸವಾರರ ಪಾಲಿಗೆ ರಕ್ಷಣೆ ನೀಡಿದ್ದಾರೆ.

- Advertisement -

Related news

error: Content is protected !!