- Advertisement -
- Advertisement -



ಕಡೇಶಿವಾಲಯ: ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ನೂತನ ಗರ್ಭ ಗುಡಿ ಮತ್ತು ತೀರ್ಥ ಮಂಟಪದ ಪುನರ್ ನಿರ್ಮಾಣದ ಶಿಲಾನ್ಯಾಸವು ಜುಲೈ 5 ಆದಿತ್ಯವಾರದಂದು ಘಂಟೆ 12:7ಕ್ಕೆ ನಡೆಯಲಿದೆ.
ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ತೀರ್ಥ ಮಂಟಪಕ್ಕೆ ಉಡುಪಿಯ ಸೋದೆ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ವಾಸ್ತು ತಜ್ಞರಾದ ಶ್ರೀ ಕೃಷರಾಜ ತಂತ್ರಿಗಳು, ಕೆ.ಕೆ. ಶೆಟ್ಟಿ ಅಹಲ್ಯಾ ನಗರ. ಎಂ. ಎಚ್, ರಾಘವೇಂದ್ರ ಎ, ರಘುನಾಥ್ ಸೋಮಾಯಾಜಿ, ಕೇಶವ ಭಟ್ ಮುಳಿಯ ಹಾಗೂ ದೇವಸ್ಥಾನದ ಅರ್ಚಕರು ಪಾಲ್ಗೊಳ್ಳಲಿದ್ದಾರೆ.
- Advertisement -







