ಬಂಟ್ವಾಳ (ನ.5): ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀರಾಮ ಭಜನಾ ಮಂದಿರ ಪ್ರತಾಪನಗರ ಇದರ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ವರ್ಷಂಪ್ರತಿ ನಡೆಸುವ ಕ್ರೀಡೋತ್ಸವದ ಸಲುವಾಗಿ ಈ ಬಾರಿಯೂ ಕೂಡ ವಿಶೇಷ ಸೆಲ್ಫೀ ಸ್ಪರ್ಧೆಯೊಂದನ್ನುಆಯೋಜಿಸಲಾಗಿದೆ.


ಕಳೆದ ನಾಲ್ಕು ವರ್ಷಗಳಿಂದ ಹಿಂದೂ ಧರ್ಮಕ್ಕೆ ಸಂಬಂಧಿತ ಸೆಲ್ಫೀ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು ಹಾಗೆಯೇ ಈ ಬಾರಿಯೂ ಸೆಲ್ಫೀ ವಿಥ್ ಜ್ಞಾನದೀವಿಗೆ ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ಜೀವನದಲ್ಲಿ ಪುಸ್ತಕಗಳ ಪಾತ್ರ ಮಹತ್ವವಾದುದ್ದು ಹಿಂದೂ ಧರ್ಮ ಗ್ರಂಥಗಳು,ದೇವರ ಸಂಕೀರ್ತನೆಗಳು,ಹಿಂದೂ ಹೋರಾಟಗಾರರು,ಸಂಸ್ಕೃತಿ ಇತ್ಯಾದಿ ಯಾವುದೇ ಪುಸ್ತಕದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಸೂಕ್ತ ಚುಟುಕಾದ ಸಾರಾಂಶದ ಜೊತೆಗೆ 9686749330 ಅಥವಾ 9483535309 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡುವುದು.

ನವೆಂಬರ್ 20 ಈ ಸ್ಪರ್ಧೆಯ ಕೊನೆಯ ದಿನವಾಗಿರುತ್ತದೆ.ಮೂರು ಜನ ವಿಜೇತರಿಗೆ ವಿಶೇಷ ಬಹುಮಾನವಿದೆ.ಸಮರ್ಪಕ ತೀರ್ಪುಗಾರರು ಈ ಸ್ಪರ್ಧೆಯ ವಿಜೇತರನ್ನು ಆರಿಸಲಿದ್ದು.ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳ ಭಾವಚಿತ್ರಗಳನ್ನು ವೀರ ಹಿಂದು ಫೇಸ್ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುವುದು.(https://www.facebook.com/VEERA-HINDU-111488633922263) ಎಂದು ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀರಾಮ ಭಜನಾ ಮಂದಿರ ಪ್ರತಾಪನಗರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

