Friday, March 5, 2021

ತೊಕ್ಕೊಟ್ಟು : ಹಿಟ್ & ರನ್ – ಪಾದಾಚಾರಿ ಸ್ಥಳದಲ್ಲೇ ಸಾವು..!

ಉಳ್ಳಾಲ: ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇಂದು ನಸುಕಿನ ಜಾವದಲ್ಲಿ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತೊಕ್ಕೊಟ್ಟಿನ ಸಹರಾ ಆಸ್ಪತ್ರೆಯ ಎದುರು ಹೆದ್ದಾರಿ ದಾಟುತ್ತಿದ್ದ ವೃದ್ಧರೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಬಂಟ್ವಾಳ, ಪಾಣೆಮಂಗಳೂರಿನ ನಿವಾಸಿ ಹಮ್ಮಬ್ಬ (60) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟು ಬಳಿಯ ಕಲ್ಲಾಪಿನಲ್ಲಿ ಸಂಬಂಧಿಕರ ಮ‌ನೆಗೆ ಬಂದಿದ್ದರೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!