Tuesday, November 24, 2026
spot_imgspot_img
spot_imgspot_img

ಕಡೇಶಿವಾಲಯ :ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ಧೋರಣೆ ವಿರುದ್ದ ಭಾರತೀಯ ಜನತಾ ಪಾರ್ಟಿ ಕಡೇಶಿವಾಲಯ ಶಕ್ತಿಕೇಂದ್ರ ವತಿಯಿಂದ ಪ್ರತಿಭಟನೆ

- Advertisement -
- Advertisement -

ಕಡೇಶಿವಾಲಯ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ತರುವಾಯ ಗ್ಯಾರೆಂಟಿ ಯೋಜನೆಗಳ ನೆಪವೊಡ್ಡಿ ಅಗತ್ಯ ವಸ್ತುಗಳ, ಸರಕಾರಿ ಬಸ್ ಗಳ ಟಿಕೆಟ್ ಬೆಲೆ ಏರಿಕೆ ಮಾಡಿರುದರಿಂದ ಜನ ಸಾಮಾನ್ಯರು ಜೀವನ ಮಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಹ ಫಲಾನುಭವಿಗಳ ಪಿಂಚಣಿಗಳು ಕೂಡ ರದ್ದಾಗಿದ್ದು ತೀರ ಬಡವರು ಕೂಡಾ ಸೌಲಭ್ಯ ವಂಚಿತರಾಗಿದ್ದಾರೆ. ಇದರೊಂದಿಗೆ ರೈತರಿಗೆ ಬೆಳೆ ವಿಮೆಯಲ್ಲಿಯೂ ತೀವ್ರ ವಂಚನೆ ಮಾಡಿದ್ದು,ಪ್ರಸ್ತುತ ಬಡಜನರಿಗೆ ಆಶ್ರಯ ಯೋಜನೆಗಳು ಕೂಡ ಮಂಜೂರಾಗುತ್ತಿಲ್ಲ, ಆದ್ದರಿಂದ ಇಂತಹ ವಚನಭೃಷ್ಟ ಸರಕಾರವನ್ನು ತೊಲಗಿಸಲು ನಾವೆಲ್ಲರೂ ಒಂದಾಗುವಂತೆ ಬಿ.ಜೆ.ಪಿ ಬಂಟ್ವಾಳ ಮಂಡಲಾಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಅವರು ರಾಜ್ಯ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ‌ ಮಾತನಾಡಿದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಬಡವರ್ಗದ ಮೇಲೆ ಈ ರೀತಿಯ ದೌರ್ಜನ್ಯ ಮುಂದುವರೆದಲ್ಲಿ ರಾಜ್ಯಾದ್ಯಂತ ಬೃಹತ್ ಜನಾಂದೋಲನ ನಡೆಸಲಾಗುವುದು ಎಂದರು.

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಾ ಪಾದಯಾತ್ರೆಯು ಗ್ರಾಮದ ಕ್ಲಲ್ಲಾಜೆ ಪಲ್ಕೆಯಿಂದ ಪೆರ್ಲಾಪು ಜಂಕ್ಷನ್ ಮೂಲಕ ಹಾದು ಪಂಚಾಯತ್ ಕಚೇರಿಗೆ ಆಗಮಿಸಿ ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ, ಬೆಲೆ ಏರಿಕೆ, ಪಿಂಚಣಿ ರದ್ದು ನಿರ್ಧಾರವನ್ನು ಖಂಡಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್ ಕಡೇಶಿವಾಲಯ,ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿದ್ಯಾಧರ ರೈ, ಪಕ್ಷದ ಹಿರಿಯ ಮುಖಂಡರಾದ ತಿರುಮಲೇಶ್ವರ ಭಟ್, ಸಾಂತಪ್ಪ ಪೂಜಾರಿ, ಧರ್ನಪ್ಪ ಪೂಜಾರಿ ಕನ್ನೊಟ್ಟು, ನಾರಾಯಣ ಸಪಲ್ಯ ಮುಂಗೂರು, ಪ್ರಮುಖರಾದ ಲೋಕನಾಥ ಪೂಜಾರಿ ತಿಮರಾಜೆ, ಸುರೇಂದ್ರ ರಾವ್ ನೆಕ್ಕಿಲಾಡಿ, ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ಶ್ಯಾಮಲಾ ಶೆಟ್ಟಿ ಚಿನ್ನಯಕಟ್ಟೆ, ಸುರೇಶ್ ಬನಾರಿ, ಶ್ರೀಮತಿ ಭಾರತಿ ಸುರೇಂದ್ರ ರಾವ್, ಮಾಜಿ ಉಪಾಧ್ಯಕ್ಷರುಗಳಾದ ಸುರೇಶ್ ಪೂಜಾರಿ ಕನ್ನೊಟ್ಟು, ಶ್ರೀಮತಿ ಜಯ ದೇವಾಡಿಗ, ಪಂಚಾಯತ್ ಮಾಜಿ ಸದಸ್ಯರಾದ ಸನತ್ ಆಳ್ವ ಅಮೈ, ಶ್ರೀಮತಿ ಪ್ರಮಿಳಾ ಕಡೆಕೋಳಿಮಜಲು, ಬೂತ್ ಪ್ರಮುಖರಾದ ಶಿವಾನಂದ ಭಂಡಾರಿಬೆಟ್ಟು, ಮಾಧವ ಪೂಜಾರಿ, ವಿಜಿತ್ ಶೆಟ್ಟಿ ಸಂಪೋಳಿ, ರವಿ ನೀರಕಜೆ, ದೇವದಾಸ್ ಪಚ್ಚಡಿಬೈಲು, ರವೀಂದ್ರ , ಸತೀಶ್ ಪಚ್ಚಡಿಬೈಲು, ಗಣೇಶ್ ನಾಯ್ಕ್, ನಾರಾಯಣ ಕಲ್ಲಾಜೆ, ವಸಂತ ಆಚಾರ್ಯ ಚಿನ್ನಯಕಟ್ಟೆ ಹಾಗೂ ಬೂತ್ ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳು, ಮಹಿಳಾ ಪ್ರಮುಖರು, ಸದಸ್ಯರು, ಪಿಂಚಣಿ ಸಂತ್ರಸ್ಥರು, ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!