Tuesday, July 1, 2025
spot_imgspot_img
spot_imgspot_img

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ದಾಳಿ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!

- Advertisement -
- Advertisement -

ಬೆಳ್ತಂಗಡಿ: ಕಳೆಂಜ ಇಲ್ಲಿಯ ಕುಡುಪ್ಪಾರು ಎಂಬಲ್ಲಿಯ ರಬ್ಬರ್ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 3 ಕ್ವಿಂಟಾಲ್ ದನದ ಮಾಂಸ ವಶಪಡಿಸಿಕೊಂಡ ಘಟನೆ ಮೇ.26 ರಂದು ವರದಿಯಾಗಿದೆ.

ಕಳೆಂಜ ಗ್ರಾಮದ ಕುಡುಪ್ಪಾರು ನಿವಾಸಿ ಬೇಬಿ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಬೇಬಿ ಹಾಗೂ ಕೈರೋಡಿ ನಿವಾಸಿ ಸೆಬಾಸ್ಟಿಯನ್ ರವರ ಪುತ್ರ ಪ್ರಿನ್ಸ್ ಎಂಬವರು ಅಕ್ರಮವಾಗಿ ದನವನ್ನು ಕೊಂದು ಮಾಂಸ ಮಾಡುವ ಕೃತ್ಯದಲ್ಲಿ ನಿರತರಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರುಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಸುಮಾರು 3 ಕ್ವಿಂಟಾಲ್ ತೂಕದ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗಣೇಶ್, ಕಳೆಂಜ ವಿಹಿಂಪ ಕಾರ್ಯದರ್ಶಿ ಉಮೇಶ್, ಕಳೆಂಜ ಬರಂಗದಳದ ಸಂಚಾಲಕ ರಾಜೇಶ್, ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಮಾಹಿತಿ ನೀಡಿ, ಸಹಕರಿಸಿದರು.

- Advertisement -

Related news

error: Content is protected !!