Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ಕಳೆಂಜ ಮೀಸಲು ಅರಣ್ಯ ಪ್ರದೇಶದ ಜಂಟಿ ಸರ್ವೆ ಕಾರ್ಯ ಆರಂಭ

- Advertisement -
- Advertisement -

ಬೆಳ್ತಂಗಡಿ : ಕಳೆಂಜ ಗ್ರಾಮದ ಅಮ್ಮಿನಡ್ಕ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ಪಂಚಾಂಗ ಅರಣ್ಯ ಇಲಾಖೆ ಅಧಿಕಾರಿಗಳು ಕೆಡವಿದ ಪ್ರಕರಣದಲ್ಲಿ ಅ.09ರಂದು ಸರ್ವೆ ಕಾರ್ಯಕ್ಕೆ ಒಪ್ಪಿಗೆ ಸೂಚಿಸುವಲ್ಲಿಗೆ ಸುಖಾಂತ್ಯ ಕಂಡಿತ್ತು. ಈ ಒಪ್ಪಂದದ ಪ್ರಕಾರ ಅ.11 ಸರ್ವೇ ಕಾರ್ಯ ಆರಂಭವಾಗಿದೆ.

ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಪವಾದಪ್ಪ ದೊಡ್ಡಮನಿ, ಗ್ರಾಮ ಆಡಳಿತ ಅಧಿಕಾರಿ ಪೃಥ್ವಿರಾಜ್ ಪಿ ಶೆಟ್ಟಿ, ಗ್ರಾಮ ಸಹಾಯಕ ಯತಿಂದ್ರ, ಭೂಮಾಪನ ಇಲಾಖೆಯ ರೇಣುಕಾ ನಾಯ್ಡ್, ರಮೇಶ್, ಭೂಮಾಪಕ ಗುರುನಾಥ್ ಮತ್ತು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಮತ್ತು ಸಿಬ್ಬಂದಿಗಳು ಕಳಂಜ 309 ಸರ್ವೆ ನಂಬರಿನಲ್ಲಿ ಜಂಟಿ ಸರ್ವೆ ಆರಂಭಿಸಿದ್ದಾರೆ. ಈ ಜಾಗದ ಸರ್ವೆ ಸರಿಸುಮಾರು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309/1 ರಲ್ಲಿ ಆಕಾರಬಂದ್ ನಂತೆ ಒಟ್ಟು ವಿಸ್ತೀರ್ಣ 8,474.50 ಎಕ್ರೆ. ಪ್ರಸ್ತುತ ಪಹಣೆಯಂತ ಒಟ್ಟು ವಿಸ್ತೀರ್ಣ 8,474.50 ಎಕ್ರೆ, ಸರಕಾರದ (ಕಲಂ 11 ರಲ್ಲಿ ಸುರಕ್ಷಿತ ಕಾಡು) – 7588.30.50 ಎಕ್ರೆ, ಅರಣ್ಯ ಇಲಾಖೆ(ನಿಡ್ಲೆ ಸುರಕ್ಷಿತ ವಿಸ್ತೃತ ಬ್ಲಾಕು) – 335.25 ಎಕ್ರೆ ಅರಣ್ಯ ಇಲಾಖೆ- 315.16 ಎಕ್ರೆ, ಅರಣ್ಯ ಇಲಾಖೆ( ಮಿಯಾರು ಸುರಕ್ಷಿತ ವಿಸ್ತೃತ ಬ್ಲಾಕು)-201.15 ಎಕ್ರೆ, ಪಹಣೆಯಲ್ಲಿ ಪ್ರಸ್ತುತ ನಮೂದಿತ ಮಂಜೂರಿದಾರರ ವಿಸ್ತೀರ್ಣ – 34.63.50 ಎಕ್ರೆ ಸೇರಿ ಒಟ್ಟು 8,474.50 ಎಕ್ರ ಒಂಟಿ ಸರ್ವೆ ನಡೆಸಲಾಗುತ್ತದೆ.

- Advertisement -

Related news

error: Content is protected !!